Thursday, August 11, 2022

Latest Posts

ತಮಿಳುನಾಡು ವಿಧಾನಸಭಾ ಚುನಾವಣೆ: ಕಮಲ್​​ ಪಕ್ಷದೊಂದಿಗೆ ನಟ ಶರತ್​​ ಕುಮಾರ್​ ಮೈತ್ರಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡುತ್ತಿದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನಟ ಶರತ್​ ಕುಮಾರ್​ ಅವರು ಮಕ್ಕಳ್​​ ನಿಧಿ ಮೈಮ್​ (ಎಂಎನ್​ಎಂ) ಪಕ್ಷದ ಸ್ಥಾಪಕ ನಟ ಕಮಲ್​ ಹಾಸನ್​ ಅವರೊಂದಿಗೆ ಮಾತುಕತೆ ನಡೆಸಿದ್ದು, ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಟ ಶರತ್​​ ಕುಮಾರ್​, ಇಂದಿಯಾ ಜಯನಾಯಕ ಕಚ್ಚಿ ಪಕ್ಷದೊಂದಿಗೆ ಕೈಜೋಡಿಸಿದ್ದು, ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಈ ಹಿನ್ನೆಲೆ ಕಮಲ್​ ಹಾಸನ್​​ ಅವರನ್ನು ಭೇಟಿ ಮಾಡಿದ್ದು, ಉತ್ತಮ ವ್ಯಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದೇವೆ. ಇದನ್ನು ಹೇಗೆ ಮುನ್ನಡೆಸಬೇಕು ಎಂದು ಅವರೇ ನಿರ್ಧರಿಸುತ್ತಾರೆ. ಶೀಘ್ರವೇ ಶುಭ ಸುದ್ದಿಯ ನಿರೀಕ್ಷೆ ಇದೆ ಎಂದು ಶರತ್​ ಕುಮಾರ್​ ಹೇಳಿದ್ದಾರೆ.
1994ರಿಂದಲೂ ರಾಜಕೀಯ ರಂಗದಲ್ಲಿ ಸಕ್ರೀಯರಾಗಿರುವ ನಟ ಶರತ್ ಕುಮಾರ್ ಅವರು 2007ದಲ್ಲಿ ತಮ್ಮ ಹೊಸ ಪಕ್ಷ ಆಲ್​ ಇಂಡಿಯಾ ಸಮತುವಾ ಮಕ್ಕಳ್ ಕಚ್ಚಿ (ಎಸ್​ಎಂಕೆ) ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಬಳಿಕ ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಸಿಎಂ ಪಳನಿಸ್ವಾಮಿ ಅವರು ಕೈಗೊಂಡ ಕ್ರಮಗಳನ್ನು ಶರತ್​ ಪ್ರಶಂಸಿದ್ದರು. ಇದರೊಂದಿಗೆ ಎಸ್​​ಎಂಕೆ ಪಕ್ಷ ಎಐಎಂಡಿಕೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎನ್ನಲಾಗಿತ್ತು. ಇದರ ನಡುವೆಯೇ ಮಾಜಿ ಸಿಎಂ ಜಯಲಲಿತಾ ಅವರ ಜನ್ಮದಿನಾಚರಣೆಯಂದು ಶರತ್​ಕುಮಾರ್ ಹಾಗೂ ಅವರ ಪತ್ನಿ, ನಟಿ ರಾಧಿಕಾ ಅವರೊಂದಿಗೆ ವಿಕೆ ಶಶಿಕಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss