Sunday, June 26, 2022

Latest Posts

ತಮ್ಮ ಪ್ರಾಣ ಲೆಕ್ಕಿಸದೇ ಜನರ ಪ್ರಾಣ ಉಳಿಸುವ ವೈದ್ಯರ ಕೆಲಸ ಅಮೂಲ್ಯವಾದ್ದು: ಸಚಿವ ಶ್ರೀ ರಾಮುಲು

ಬೆಂಗಳೂರು: ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೊರೊನಾ ಸಂಕಷ್ಟ ವೇಳೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಮೂಹಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಶುಭ ಕೋರಿದ್ದಾರೆ.
ವೈದ್ಯರ ದಿನದ ಅಂಗವಾಗಿ ವಿಡಿಯೋ ಹಂಚಿಕೊಂಡಿರುವ ಶ್ರೀರಾಮುಲು, ಕಾನೂನು ಉಳಿಸುವ ವಕೀಲರು, ಜೀವ ಉಳಿಸುವ ವೈದ್ಯರು ದೇವರ ಸಮಾನ. ನಾವೆಲ್ಲರೂ ಅವರನ್ನು ಗೌರವದಿಂದ ನೋಡಬೇಕು ಎಂದು ಹೇಳಿದ್ದಾರೆ. ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಸಮಸ್ತ ವೈದ್ಯ ಸಮೂಹಕ್ಕೆ ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಕುಟುಂಬ ಸದಸ್ಯರಿಗೆ ಶುಭಾಶಯಗಳು. ದೇಶವನ್ನು ಸೈನಿಕರು ಕಾಯುವಂತೆ ಜನರ ಆರೋಗ್ಯ ಕಾಪಾಡುವ, ಇನ್ನೊಬ್ಬರ ಪ್ರಾಣ ಉಳಿಸುವ ಮಹಾತ್ಕಾರ್ಯದಲ್ಲಿ ತೊಡಗಿರುವ ವೈದ್ಯರ ಶ್ರಮ ಅಮೂಲ್ಯವಾದುದು.
ಕರ್ನಾಟಕದ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮಸ್ತ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು. ಜೊತೆಯಾಗಿ ಹೋರಾಡೋಣ, ನಾಡಿನಿಂದ ಕೊರೋನ ತೊಲಗಿಸೋಣ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss