Sunday, June 26, 2022

Latest Posts

ತಲಪಾಡಿ ಗಡಿಯಲ್ಲಿ ಕೇರಳ ಪಾಸ್ ನಲ್ಲಿ ಸದ್ಯಕ್ಕೆ ಬದಲಾವಣೆ ಇಲ್ಲ: ಕಾಸರಗೋಡು ಜಿಲ್ಲಾಡಳಿತ ಸ್ಪಷ್ಟನೆ

ಕಾಸರಗೋಡು: ಕೇರಳ – ಕರ್ನಾಟಕ ಅಂತಾರಾಜ್ಯ ತಲಪಾಡಿ ಗಡಿಯಲ್ಲಿ ಕೇರಳ ಸರಕಾರದ ಪ್ರಯಾಣ ಪಾಸ್ ನಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕಾಸರಗೋಡು ಜಿಲ್ಲಾಡಳಿತವು ತಿಳಿಸಿದೆ.
ಈ ಬಗ್ಗೆ ಬರುತ್ತಿರುವ ವರದಿಗಳು ಸತ್ಯಕ್ಕೆ ದೂರವಾದುದು ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ ಕೇಂದ್ರ ಸರಕಾರವು ಜೂನ್ 30 ರಂದು ಅಂತಾರಾಜ್ಯ ಗಡಿ ವಿಷಯದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದ್ದು , ಅದನ್ನು ಗಮನಿಸಿಕೊಂಡು ಮುಂದೆ ಕೇರಳ ಪಾಸ್ ನಲ್ಲಿ ಬದಲಾವಣೆ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಸದ್ಯಕ್ಕೆ ಕೇರಳ – ಕರ್ನಾಟಕ ಪಾಸ್ ವ್ಯವಸ್ಥೆ ಹಾಗೆಯೇ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು , ಈ ನಿಮಿತ್ತ ಹೊಸ ಪಾಸ್ ನಿಲುಗಡೆ ಮಾಡಲಾಗಿದೆ ಎಂಬುದಾಗಿ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಬಂದಿತ್ತು. ಅದಕ್ಕೆ ಜಿಲ್ಲಾಡಳಿತವು ತೆರೆ ಎಳೆದಿದೆ. ಈ ಮಧ್ಯೆ ಕೇರಳದಿಂದ ಕರ್ನಾಟಕಕ್ಕೆ ತೆರಳುವ ಇತರ ಕೆಲವು ಪ್ರಧಾನ ರಸ್ತೆಗಳಿಗೆ ಕಾಸರಗೋಡು ಜಿಲ್ಲಾಧಿಕಾರಿಯವರ ಆದೇಶದಂತೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss