Sunday, April 18, 2021

Latest Posts

ತಲಪಾಡಿ ಟೋಲ್ ಬಳಿ ಸ್ಕೂಟರಿನಲ್ಲಿ ಬಂದು ಮರಳು ಅಕ್ರಮ ಸಾಗಾಟದ ಲಾರಿಗೆ ಅಡ್ಡಗಟ್ಟಿದ ಪೊಲೀಸರು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಂಗಳೂರು ಪೊಲೀಸ್ ಕಮೀಷನರ್ ಮತ್ತು ಡಿಸಿಪಿ ಜಂಟಿ ದಾಳಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಪೊಲೀಸ್ ಕಮೀಷನರ್ ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಂ ಇಬ್ಬರು ಒಂದೇ ಸ್ಕೂಟರಿನಲ್ಲಿ ತಲಪಾಡಿ ಗಡಿಭಾಗಕ್ಕೆ ಪರಿಶೀಲನೆಗೆಂದು ಬಂದಿದ್ದರು. ಈ ಸಂದರ್ಭ ತಲಪಾಡಿ ಟೋಲ್ ಬೂತ್​​​ನಲ್ಲಿ ದಾಟಿ ಕೇರಳ ಕಡೆಗೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ಕಂಡು ಅಡ್ಡಗಟ್ಟಿದ್ದಾರೆ‌.
ಈ ವೇಳೆ ಪೊಲೀಸ್ ಕಮೀಷನರ್ ಎಂದು ತಿಳಿಯದೆ ಮರಳು ಲಾರಿಗೆ ಎಸ್ಕಾಟ್೯ ನೀಡುತ್ತಿದ್ದ ಕಾರಿನಲ್ಲಿದ್ದವರು ಅಡ್ಡಗಟ್ಟಲು ಮುಂದಾದಾಗ ಕಮೀಷನರ್, ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಮರಳು ಲಾರಿಗೆ ಎಸ್ಕಾಟ್೯ ನೀಡುತ್ತಿದ್ದ ಚಂದ್ರ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಮರಳು ಸಾಗಾಟದ ಲಾರಿಯನ್ನು ಮಾತ್ರ ತಲಪಾಡಿ ಟೋಲ್​​​ನಲ್ಲಿಯೇ ನಿಲ್ಲಿಸಲಾಗಿದೆ.
ಈ ವೇಳೆ ಅಕ್ರಮ ಮರಳು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss