ತಲಶೇರಿ- ಕೂರ್ಗ್ ರಾಜ್ಯ ಹೆದ್ದಾರಿ- 30 ಬಿಕ್ಕಟ್ಟು: ಪ್ರದಾನಿಗೆ ಪಿನರಾಯಿ ವಿಜಯನ್ ಪತ್ರ

0
105

ತಿರುವನಂತಪುರಂ: ತಲಶೇರಿ- ಕೂರ್ಗ್ ರಾಜ್ಯ ಹೆದ್ದಾರಿ- 30ಯನ್ನು ಕರ್ನಾಟಕ ಪೊಲೀರು ಬಂದ್ ಮಾಡಿರುವ ಹಿನ್ನಲೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿ ಗೆ ಮಧ್ಯ ಪ್ರವೇಶಿಸುವಂತೆ ಕೋರಿ ಪತ್ರ ಬರೆದಿದ್ದಾರೆ.

ಕೇರಳಕ್ಕೆ ಬೇಕಾಗಿರುವ ಅವಶ್ಯ ಸರಕುಗಳನ್ನು ಕಾರ್ನಾಟಕದ ವಿರಾಜಪೇಟೆ ಮೂಲಕ ಕೇರಳ ತಲುಪುತ್ತಿತ್ತು, ಆದರೆ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ ಬಳಿಕ ಈ ದಾರಿಗಳು ಬಂದ್ ಆಗಿದ್ದು, ಸರಕು ಸಾಗಾಣೆ ಮಾಡುವವರು ಹೆಚ್ಚು ಉದ್ದದ ಮಾರ್ಗದಿಂದ ರಾಜ್ಯ ತಲುಪಬೇಕಾಗಿದೆ. ಇದರಿಂದ ಜನರಿಗೆ ಕಷ್ಟವಾಗುತ್ತಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರು ಅವಶ್ಯ ವಸ್ತುಗಳ ಸಾಗಾಣಿಕೆಗೆ ತೊಂದರೆಯಾಗಬಾರದು ಎಂದು ನೀವು ಸ್ವಾಭಾವಿಕವಾಗಿ ಒಪ್ಪುತ್ತೀರಿ.

ಕೋವಿಡ್- 19ರ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯದಲ್ಲಿ ಅಗತ್ಯ ವಸ್ತುಗಳಗಳ ಸಂಚಾರವೂ ಸುಗಮವಾಗಿರಬೇಕಾಗಿದ್ದು, ದಯವಿಟ್ಟು ಈ ವಿಚಾದಲ್ಲಿ ನೀವು ಮಧ್ಯಪ್ರವೇಶಿಸಬೇಕೆಂದು ಕೋರುತ್ತೇನೆ ಎಂದು ಪಿನರಾಯಿ ವಿಜಯನ್ ಪತ್ರದಲ್ಲಿ ಬರೆದಿದ್ದಾರೆ.

LEAVE A REPLY

Please enter your comment!
Please enter your name here