Thursday, August 18, 2022

Latest Posts

ತಲೆಯ ಮೇಲೆ ಕಲ್ಲು ಹಾಕಿ ಅಪರಿಚಿತ ಮಹಿಳೆ ಬರ್ಬರ ಹತ್ಯೆ

ಹಾಸನ: ತಲೆಯ ಮೇಲೆ ಕಲ್ಲು ಹಾಕಿ ಅಪರಿಚಿತ ಮಹಿಳೆಯನ್ನು ಬರ್ಬರ ಹತ್ಯೆ ಗೈದಿರುವ ಘಟನೆ ನಗರದ ಎನ್.ಆರ್ ವೃತ್ತದಲ್ಲಿ ನಡೆದಿದೆ.
ಎನ್.ಆರ್ ವೃತ್ತದ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಬಾಗಿಲಿನಲ್ಲಿ ಮಹಿಳೆ ಶವ ಪತ್ತೆಯಾಗಿದ್ದು,
ಅತ್ಯಾಚಾರ ಎಸಗಿ ಮಹಿಳೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಹಿಳೆ ಯಾರೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಎಂಟು ಕೊಲೆ ಪ್ರಕರಣ ನಡೆದಿದ್ದು,ಜನತೆಯಲ್ಲಿ ಆತಂಕ ಮನೆ ಮಾಡಿದೆ. ಪ್ರಕರಣ ಸಂಬಂಧ ನಗರಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!