ನಮ್ಮ ಬ್ಯುಸಿ ಜೀವನದಲ್ಲಿ ನಮ್ಮ ಕೂದಲಿನ ಆರೈಕೆ ಮಾಡಲು ಸಮಯ ಕೊಡೋದೆ ಕಷ್ಟವಾಗಿಬಿಟ್ಟಿರುತ್ತದೆ. ಸರಿಯಾದ ಆರೈಕೆ ಇಲ್ಲದೆ ಕೂದಲು ಸಾಮಾನ್ಯವಾಗಿ ಹೆಚ್ಚು ಉದುರುತ್ತದೆ. ಆದರೆ ಕೂದಲು ಒದ್ದೆ ಇರುವಾಗ ಹೇಗೆ ಕಾಳಜಿ ಮಾಡೋದು ಅಂತ ನೋಡಿ..
ಕೂದಲು ಬಾಚಬೇಡಿ: ಒದ್ದೆ ಕೂದಲನ್ನು ಬಾಚಬೇಡಿ. ಇದರಿಂದ ಕೂದಲು ಉದುರುವಿಕೆ, ಕವಲೊಡೆಯುವಿಕೆ ಹಾಗೂ ತುಂಡಾಗುವುದು ಹೆಚ್ಚಾಗುತ್ತದೆ. ಹಾಗಾಗಿ ಕೂದಲು ಒದ್ದೆ ಇರುವಾಗ ಬಾಚುವುದು ಒಳ್ಳೆಯದಲ್ಲ.
ಹೇರ್ ಡ್ರೈಯರ್ ಬಳಸಬೇಡಿ: ಹೇರ್ ಡ್ರಯರ್ ನಿಂದ ಬರುವ ಬಿಸಿ ಗಾಳಿ ನೇರವಾಗಿ ಕೂದಲಿಗೆ ತಾಗುವುದರಿಂದ ಕೂದಲುದುರುವ ಹಾಗೂ ಕೂದಲು ಹಾನಿಯಾಗುತ್ತದೆ.
ಬ್ಯಾಂಡ್ ಗಟ್ಟಿಯಾಗಿ ಕಟ್ಟಬೇಡಿ: ಒದ್ದೆ ಇರುವ ಕೂದಲಿಗೆ ಗಟ್ಟಿಯಾದ ಬ್ಯಾಂಡ್ ಹಾಕುವುದು ಕೂದಲುದುರುವಿಕೆಯನ್ನು ಹೆಚ್ಚಿಸುತ್ತದೆ.
ತುಂಬಾ ಹೊತ್ತು ಟವೆಲ್ ಕಟ್ಟಬೇಡಿ: ಒದ್ದೆ ಕೂದಲನ್ನು ಟವಲ್ ನಲ್ಲಿ ಕಟ್ಟುವುದರಿಂದ ಕೂದಲಿನಲ್ಲಿನ ತೇವಾಂಶ ಸಂಪೂರ್ಣ ಹೀರಿಕೊಂಡು ಕೂದಲು ರಫ್ ಆಗಲಿದೆ.