ವಯಸ್ಸಿಗೆ ಮುಂಚೆಯೇ ನಿಮ್ಮ ಕೂದಲು ಉದುರಿ ಬೋಳು ತಲೆಯಾಗುತ್ತಿದೆಯೇ? ಹಾಗಿದ್ದರೆ ಹೆದರಬೇಡಿ ಈ ಮನೆ ಮದ್ದುಗಳನ್ನು ಪ್ರಯತ್ನ ಮಾಡಿ ನೋಡಿ..
ಮಸಾಜ್: ನಿಮ್ಮ ಕೂದಲು ಹೆಚ್ಚು ಉದುರಿ ನಿಮ್ಮ ತಲೆ ಬೋಳಾಗುತ್ತದೆ ಎನಿಸಿದರೆ ನಿಮ್ಮ ತಲೆ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಇದರಿಂದ ನಿಮಗೆ ರಿಲೀಫ್ ಆಗಿ ಟೆನ್ಷನ್ ಕೂಡ ಕಡಿಮೆಯಾಗುತ್ತದೆ.
ಅಲೋವೆರಾ: ಇದು ಎಲ್ಲಾ ರೋಗಗಳಿಗೂ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಂತೆಯೇ ಅಲೋವೆರಾ ಕೂದಲುದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು ನಿಮ್ಮ ತಲೆ ಬುಡಕ್ಕೆ ವಾರಕ್ಕೆ ಎರಡು ಬಾರಿ ಹಚ್ಚುವುದು ಪರಿಣಾಮಕಾರಿಯಾಗಲಿದೆ.
ಕೊಬ್ಬರಿ ಎಣ್ಣೆ: ಎಲ್ಲರಿಗೂ ಗೊತ್ತಿರುವ ಹಾಗೆ ಕೊಬ್ಬರಿ ಎಣ್ಣೆಯಲ್ಲಿರುವ ಪೋಷಕಾಂಶಗಳು ಕೂದಲು ಉದರುವುದನ್ನು ತಡೆಯುತ್ತದೆ. ರಾತ್ರಿ ಇಡೀ ಕೂದಲಿಗೆ ಹಚ್ಚಿ ಬೆಳಗ್ಗೆ ಕೂದಲು ತೊಳೆಯುವುದು ಉತ್ತಮ.
ಮೀನು ಎಣ್ಣೆ(fish oil): ಇದರಲ್ಲಿರುವ ಒಮೇಗಾ ಅಂಶವು ಕೂದಲಿಗೆ ಬುಡದಿಂದ ಶಕ್ತಿ ನೀಡಿ, ಕೂದಲು ಉದರುವುದನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ಜ್ಯೂಸ್: ಕೂದಲಿಗೆ ಈರುಳ್ಳಿ ಔಷಧವಾಗಿ ಕೆಲಸ ಮಾಡುತ್ತದೆ. ಇದರು ರಕ್ತ ಸಂಚಲನವನ್ನು ವೃದ್ಧಿಸಿ ಕೆರಾಟಿನ್ ಅಂಶವನ್ನು ಹೆಚ್ಚಿಸುತ್ತದೆ.