ಹಾವೇರಿ: ಭೂಸೇನೆಯಲ್ಲಿ ಸಾರ್ಥಕ ೧೭ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಮರಳಿದ ತಾಲೂಕಿನ ಅಗಡಿ ಗ್ರಾಮದ ವೀರಯೋಧ ಸುಭಾಸ ಪಟ್ಟಣಶೆಟ್ಟಿ ಅವರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಹಾಗೂ ಹೃದಯಸ್ಪರ್ಶಿ ಸನ್ಮಾನ ಜರುಗಿತು.
ಅಗಡಿ ಗ್ರಾಮದ ಪ್ರೌಢಶಾಲೆಯ ಅವರ ಬಾಲ್ಯದ ಗೆಳೆಯರು ವೀರಯೋಧ ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಭಾರತ ಮಾತಾ ಕಿ ಜೈ ಎನ್ನುವ ಜಯಘೋಷದೊಂದಿಗೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರಕಾಶ ಅಂಬಿಗೇರ, ನೀಲಪ್ಪ ಬಣಕಾರ, ರುದ್ರಯ್ಯ ಕೊಡಬಾಳಹಿರೇಮಠ, ಸುಭಾಸ ಮಡಿವಾಳರ, ಸುಭಾಸ ಚಟ್ರಮ್ಮನವರ, ಕಿರಣ ಬಸೇಗಣ್ಣಿ, ಪ್ರಕಾಶ ಹೊಸಮನಿ, ರಿಯಾಜ ಕ್ವಾಟಿನಾಯ್ಕ, ಮಹೇಶ ಗಾಜಿ, ಅಶೋಕ ಶಿವಣ್ಣನವರ, ಕರಬಸಪ್ಪ ಕಿಳ್ಳಿ, ನಿಂಗಪ್ಪ ಕೆಸರಳ್ಳಿ, ಮಂಜುನಾಥ ಉಪ್ಪಾರ, ಬಸವರಾಜ ಹೊಸಳ್ಳಿ, ಶೀವಾನಂದ ಲಿಂಗದಹಳ್ಳಿ ಹಾಗೂ ಸುರೇಶ ದೇವಗಿರಿ ಗೆಳೆಯರು ಜಯಘೊಷದೊಂದಿಗೆ ಗೌರವಿಸಿ ಗೆಳೆತನದ ಬಾಂಧವ್ಯ ಮೆರೆದರೆ. ಪ್ರೌಢಶಾಲೆಯಲ್ಲಿ ಕಲಿಸಿದ ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಅವರನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಿದರು.
ನಂತರ ಗ್ರಾಮದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿಮಾನಿಗಳು ವೀರಯೋಧನೊಂದಿಗೆ ಹುಕ್ಕೇರಿಮಠಕ್ಕೆ ತೆರಳಿ ಸದಾಶಿವ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಮಾಜಿ ಯೋಧರು, ಗಣ್ಯರು, ಅವರನ್ನು ಗೌರವಿಸಿ ತೆರೆದ ಜೀಪಿನಲ್ಲಿ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ತೆರಳಿದರು.
ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ವೀರಯೋಧನ ಮನೆಗೆ ಆಗಮಿಸಿ ಗೌರವಿಸಿದರು. ನಾಗರಾಜ ಬಸೇಗಣ್ಣಿ, ಹೇಮಂತ, ಡಾ. ಸತೀಶ ಈಳಿಗೇರ ಸೇರಿದಂತೆ ಮತ್ತಿತರರಿದ್ದರು.