Tuesday, June 28, 2022

Latest Posts

ತವರಿಗೆ ಹೊರಟಿದ್ದ ತುಂಬು ಗರ್ಭಿಣಿ ಬಸ್’ಲ್ಲೇ ತಾಯಿಯಾದಳು!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಖಾಸಗಿ ಬಸ್’ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಸಮೀಪದ ಬಿ.ಜಿ. ಕೆರೆಯಲ್ಲಿ ನಡೆದಿದೆ.

25 ವರ್ಷದ ಮಹಿಳೆ ಖಾಸಗಿ ಬಸ್ ನಲ್ಲಿ ತಂದೆಯೊಂದಿಗೆ ಹೆರಿಗೆಗಾಗಿ ತವರು ಮನೆಗೆ ಹೊರಟಿದ್ದರು. ಬೆಂಗಳೂರಿನಿಂದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಅರೆಸಿಕೆರೆ ಗ್ರಾಮಕ್ಕೆ ಅವರು ಹೋಗಬೇಕಿತ್ತು. ಆದರೆ ಬೆಳಗಿನ ಜಾವ ಬಸ್’ನಲ್ಲಿ ತೆರಳುತ್ತಿರುವಾಗಲೇ ಹೆರಿಗೆ ನೋವು ಕಾಣಿಸಿದ್ದು, ಬಸ್’ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss