Thursday, March 4, 2021

Latest Posts

ತಾಂಡವ್ ವಿರುದ್ಧ ಆಕ್ರೋಶ: ಬದಲಾವಣೆಗೆ ಒಪ್ಪಿದ ತಂಡ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿವಾದಿತ ವೆಬ್ ಧಾರಾವಾಹಿ ತಾಂಡವ್ ದಲ್ಲಿ ಬದಲಾವಣೆ ಮಾಡುವುದಾಗಿ ಚಿತ್ರ ನಿರ್ಮಾಣ ತಂಡ ಮಂಗಳವಾರ ಹೇಳಿದೆ.
ಬಾಲಿವುಡ್ ನಟ ಸೈಫ್ ಅಲಿಖಾನ್, ಡಿಂಪಲ್ ಕಪಾಡಿಯಾ, ಮೊಹಮ್ಮದ್ ಜೀಶನ್ ಅಯುಬ್ ಅಭಿನಯಿಸಿರುವ ಈ ಧಾರಾವಾಹಿ ಕಳೆದ ವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಆದರೆ, ಹಿಂದುಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬ ಕಾರಣದಿಂದ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ತಂಡ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಹೊಂದಿಲ್ಲ . ನಮ್ಮ ದೇಶದ ಜನರ ಭಾವನೆಗಳಿಗೆ ಗೌರವ ನೀಡುತ್ತೇವೆ. ಧರ್ಮ, ಜಾತಿ. ನಂಬಿಕೆಗಳಿಗೆ ಧಕ್ಕೆ ತರುವ ಅಥವಾ ಯಾವುದೇ ಸಂಸ್ಥೆ, ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು ನೋವಿಸುವ ಉದ್ದೇಶ ಇಲ್ಲ. ವೆಬ್ ಸೀರಿಸ್ ನಲ್ಲಿ ಬದಲಾವಣೆ ಮಾಡಲು ನಿರ್ಧಾರ ಕೈಗೊಂಡಿದೆ ಎಂದು ತಿಳಿಸಲಾಗಿದೆ.
ಈ ವಿಚಾರದಲ್ಲಿ ಯಾರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಮತ್ತೊಮ್ಮೆ ಕ್ಷಮೆಯಾಚಿಸುವುದಾಗಿ ತಿಳಿಸಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!