Sunday, June 26, 2022

Latest Posts

ತಾಯಿಯನ್ನು ನಿಂದಿಸಿದ ವೃದ್ಧನಿಗೆ ಚಾಕು ಇರಿದು ಹತ್ಯೆ

ಮಂಡ್ಯ : ತಾಯಿಯನ್ನು ನಿಂಧಿಸಿದ ವೃದ್ಧನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚಿಕ್ಕವೀರಯ್ಯ (72) ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಈತನನ್ನು ಅದೇ ಗ್ರಾಮದ ಮೋಹನ್ (44) ಚಾಕುವಿನಿಂದ ಇರಿದು ಹತ್ಯೆ ಮಾಡಿದವನಾಗಿದ್ದಾನೆ.

ಚಿಕ್ಕವೀರಯ್ಯ ಮತ್ತು ಮಹೇಶನ ಮನೆಗಳು ಅಕ್ಕಪಕ್ಕದಲ್ಲಿದ್ದು, ಈ ಕುಟುಂಬಗಳ ನಡುವೆ ಆಗಾಗ್ಗೆ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿತ್ತೆನ್ನಲಾಗಿದೆ. ನಿನ್ನೆ ರಾತ್ರಿ ಚಿಕ್ಕವೀರಯ್ಯ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಮಹೇಶನ ತಾಯಿಯನ್ನು ನಿಂದಿಸಿದ್ದಾನೆ.

ಚಿಕ್ಕವೀರಯ್ಯ ಜಗಳ ತೆಗೆದು ನಿಂದಿಸಿದ ವಿಚಾರವನ್ನು ಮನೆಗೆ ಬಂದ ಮಗ ಮಹೇಶನಿಗೆ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಮಹೇಶ ಚಿಕ್ಕವೀರಯ್ಯನ ಮನೆಗೆ ತೆರಳಿ ಆತನಿಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಿಂದಾಗಿ ಕುಸಿದುಬಿದ್ದ ಚಿಕ್ಕವೀರಯ್ಯನನ್ನು ಆತನ ಕುಟುಂಬದವರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಅಸುನೀಗಿದ್ದಾನೆ.

ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷ ಮಹೇಶ್ ಮತ್ತು ಇತರೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss