Tuesday, July 5, 2022

Latest Posts

ತಾಲೀಮಿನಲ್ಲಿದ್ದ ಭಾರತೀಯ ನೌಕಾಪಡೆಯ ಮಿಗ್ ವಿಮಾನ ಪತನ

ಪಣಜಿ: ತಾಲೀಮಿನಲ್ಲಿ ತೊಡಗಿದ್ದ ಭಾರತೀಯ ನೌಕಾಪಡೆಗೆ ಸೇರಿದ ಮಿಗ್ -೨೯ಕೆ ವಿಮಾನ ಗೋವಾದಲ್ಲಿ ಪತನಗೊಂಡಿದ್ದು, ಅವಘಡದಲ್ಲಿ ವಿಮಾನದ ಪೈಲೆಟ್ ಸುರಕ್ಷಿತವಾಗಿ ಪಾರಾಗಿದ್ದಾರೆ.
ಭಾನುವಾರ ಬೆಳಗ್ಗೆ 10.30 ರ ಸುಮಾರಿಗೆ ಈ ವಿಮಾನ ತಾಲೀಮಿನಲ್ಲಿ ತೊಡಗಿತ್ತು. ಮುಂದಿನ ಕೆಲವೇ ಕ್ಷಣಗಳಲ್ಲಿ ಇದು ಪತನಗೊಂಡಿದೆ. ಘಟನೆಗೆ ಸ್ಪಷ್ಟ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಈ ಬಗ್ಗೆ ತನಿಖೆ ಆರಂಭಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss