ಹೊಸ ದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯ ತಾಳಗುಪ್ಪ ರೈಲ್ವೆ ನಿಲ್ದಾಣದಿಂದ ಇನ್ನು ಮುಂದೆ ರೈಲ್ವೆ ಮೂಲಕ ಪಾರ್ಸೆಲ್ಗಳನ್ನು ಕಳಿಸಬಹುದಾಗಿದೆ. ಇದಕ್ಕೆ
ಭಾರತೀಯ ರೈಲ್ವೆ ಅವಕಾಶ ಕಲ್ಪಿಸಿದೆ.
ಬೆಂಗಳೂರು-ತಾಳಗುಪ್ಪ(ರೈಲು ಸಂಖ್ಯೆ 06529/06530) ಪ್ರತಿದಿನ, ಮೈಸೂರು-ತಾಳಗುಪ್ಪ -ಬೆಂಗಳೂರು ಮೂಲಕ ಸಂಚಾರ
( ರೈಲು ಸಂಖ್ಯೆ 06227/06228), ಮೈಸೂರು-ತಾಳಗುಪ್ಪ ಇಂಟರ್ಸಿಟಿ( ರೈಲು ಸಂಖ್ಯೆ 06295/06296) ರೈಲು ಮೂಲಕ ಪಾರ್ಸೆಲ್ ಕಳಿಸಬಹುದಾಗಿದೆ ಎಂದು ನೈಋತ್ಯ ರೈಲ್ವೆ ವಿಭಾಗದ ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಡಾ.ಮಂಜುನಾಥ ಕನಮಾಡಿ ತಿಳಿಸಿದ್ದಾರೆ.
ರೈಲಿನ ಮೂಲಕ ರೈತರ ಉತ್ಪನ್ನಗಳು, ವಿದ್ಯುತ್ ಉಪಕರಣಗಳು, ಔಷಧ, ಮೆಷಿನರಿ ಸಾಮಗ್ರಿಗಳನ್ನು ಕಳಿಸಬಹುದಾಗಿದೆ.