Sunday, March 7, 2021

Latest Posts

ತಿಂಗಳು ಪೂರ್ತಿ ದುಡಿದ ಹಣ ಕೆಲವೇ ದಿನಗಳಲ್ಲಿ ಖರ್ಚಾಗುತ್ತಿದೆಯಾ? ದುಡ್ಡು ಉಳಿಸಲು ಈ ಟೆಕ್ನಿಕ್ ಫಾಲೋ ಮಾಡಿ..

ತಿಂಗಳು ಪೂರ್ತಿ ದುಡಿದ ಸಂಬಳವನ್ನು ಏನು ಮಾಡ್ತೀರಾ? ಸಂಬಳ ಬರುವುದಕ್ಕೆ ತುಂಬಾ ದಿನ ಬೇಕು, ಆದರೆ ಬಂದ ತಕ್ಷಣ ಖಾಲಿಯಾಗಿ ಹೋಗುತ್ತದೆ. ತಿಂಗಳ ಕೊನೆಯಲ್ಲಿ ಕೈ ಕಾಲಿಯಾಗಿರುತ್ತದೆ. ಬರುವ ಸಂಬಳವನ್ನು ಸೇವ್ ಮಾಡುವುದು ದೂರದ ಮಾತು, ಇನ್ನೂ ಹಣ ಕಡಿಮೆ ಬೀಳುತ್ತದೆ. ಹೀಗೆ ಆದರೆ ಹಣ ಸೇವ್ ಮಾಡುವುದು ಹೇಗೆ? ಉಳಿತಾಯ ಮಾಡೋದಕ್ಕೆ ಕೆಲವು ಟಿಪ್ಸ್ ಅನುಸರಿಸಿ.. ಯಾವ ಟಿಪ್ಸ್ ನೋಡಿ..

  • ಬಜೆಟ್ ಲಿಸ್ಟ್: ನಿಮ್ಮ ಬಳಿ ಎಷ್ಟು ಹಣ ಇದೆ, ಆ ಹಣವನ್ನು ಯಾವ ವಿಷಯಗಳಿಗೆ ವ್ಯಯಿಸುತ್ತೀರಾ? ಮನೆ ಖರ್ಚು,ಬಾಡಿಗೆ, ದಿನಸಿ,ಬಿಲ್ ಹೀಗೆ ಎಲ್ಲದಕ್ಕೂ ಡಿವೈಡ್ ಮಾಡಿ ಎಲ್ಲಿ ಉಳಿತಾಯ ಸಾಧ್ಯ ನೋಡಿ..
  • ತಿಪ್ಪೆಗೆಸೆದರೂ ಲೆಕ್ಕ ಇರಲಿ: ಹಣ ಎಲ್ಲಿ ಹೋಗುತ್ತಿದೆ? ಹತ್ತು ರೂಪಾಯಿ ಸೋಪ್ ತಂದರೂ ಲೆಕ್ಕ ಬರೆದಿಡಿ. ಒಂದು ತಿಂಗಳು ಹೀಗೆ ಮಾಡಿ ನೋಡಿ. ನಿಮ್ಮ ಹಣ ಹೇಗೆಲ್ಲಾ ಖರ್ಚಾಗುತ್ತದೆ ತಿಳಿಯುತ್ತದೆ.
  • ಅಕೌಂಟ್ ಮಾಡಿಕೊಳ್ಳಿ: ಪ್ರತಿ ತಿಂಗಳು ನಾನಿಷ್ಟು ಹಣ ಉಳಿಸುತ್ತೇನೆ ಎಂದು ಮನಸ್ಸು ಮಾಡಿ, ಹೊಸ ಅಕೌಂಟ್ ಮಾಡಿಕೊಳ್ಳಿ. ತಿಂಗಳ ಸಂಬಳ ಬಂದ ತಕ್ಷಣ ಮೊದಲು ಅದಕ್ಕೆ ಹಣ ಹಾಕಿ.
  • ಖರ್ಚು ಕಡಿಮೆ ಮಾಡಿ: ಮನೆಯಲ್ಲಿ ಹತ್ತು ಚೇರ್ ಇದ್ದರೆ ಹನ್ನೊಂದನೆ ಚೇರ್ ಅವಶ್ಯಕತೆ ಏನಿದೆ? ಹೀಗೆ ಬೇಡವಾದ್ದನ್ನು ಖರೀದಿ ಮಾಡುವುದು ನಿಲ್ಲಿಸಿ. ಆಗ ಹಣ ತಾನಾಗೇ ಉಳಿಯುತ್ತದೆ.
  • ಶೋಕಿ ಜೀವನ ಏಕೆ?: ನಿಮ್ಮ ಬಳಿ ನೂರು ಬಟ್ಟೆ ಇದ್ದರೂ ಮತ್ತೆ ಬಟ್ಟೆ ಏಕೆ ಬೇಕು? ಪದೇ ಪದೆ ಫ್ಯಾನ್ಸಿ ರೆಸ್ಟೋರೆಂಟ್‌ಗಳಿಗೆ ಏಕೆ ತೆರಳಬೇಕು. ಸ್ವಲ್ಪ ಹಣ ನಿಮ್ಮದಾಗಿಸಿಕೊಳ್ಳುವವರೆಗೂ ಈ ರೀತಿ ಆಸೆಗಳನ್ನು ಕಂಟ್ರೋಲ್ ಮಾಡಿ.
  • ತಿಂಗಳಿಗೊಮ್ಮೆ.. ನಾನು ತಿಂಗಳಿಗೊಮ್ಮೆ ಹೊರಗೆ ಹೋಗಿ ತಿನ್ನುತ್ತೇನೆ. ತಿಂಗಳಿಗೊಮ್ಮೆ ಬಟ್ಟೆ ತೆಗೆದುಕೊಳ್ಳುತ್ತೇನೆ ಹೀಗೆ ನಿಮ್ಮ ಪ್ಲಾನ್ ನೀಟಾಗಿರಲಿ. ಇದಕ್ಕೆ ನಿಮ್ಮ ಪಾರ್ಟ್‌ನರ್‌ನನ್ನೂ ಸೇರಿಸಿಕೊಳ್ಳಿ. ಇಬ್ಬರೂ ಹಣ ಉಳಿತಾಯ ಮಾಡಿದರೆ ನೆಮ್ಮದಿ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss