ತುಂಬಾ ಸಲಿ ಹಾಗಾಗಿರುತ್ತದೆ ತಿಂಡಿಗೆಂದು ಚಪಾತಿ ಮಾಡಿರುತ್ತೇವೆ. ಚಪಾತಿ ಹೆಚ್ಚಾಗುತ್ತದೆ. ಚಪಾತಿಯನ್ನು ಏನು ಮಾಡುವುದೆಂದು ಗೊತ್ತಾಗುವುದಿಲ್ಲ. ಮಧ್ಯಾಹ್ನ ಊಟಕ್ಕೂ ತಿನ್ನಲು ಇಷ್ಟವಾಗುವುದಿಲ್ಲ. ಇನ್ನೂ ಮುಂದೆ ಚಪಾತಿ ಹೆಚ್ಚಾದರೆ ಚಿಂತಿಸ ಬೇಡಿ. ಚಪಾತಿಯಿಂದ ಸೂಪ್ ತಯಾರಿಸಬಹುದು.
ಬೇಕಾಗುವ ಪದಾರ್ಥ:
ಎಣ್ಣೆ
ಬೆಳ್ಳುಳ್ಳಿ
ಜೀರಿಗೆ
ಸಾಸಿವೆ
ಕೊತ್ತಂಬರಿ ಸೊಪ್ಪು
ಉಪ್ಪು
ಲಿಂಬು
ಸಕ್ಕರೆ
ಕಾಳು ಮೆಣಸು
ಕರಿ ಬೇವು
ಚಪಾತಿ
ಇಂಗು
ಅರಿಶಿಣ
ಮಾಡುವ ವಿಧಾನ:
ಮೊದಲಿಗೆ ೫ ಚಮಚ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ನಂತರ ೧೦ ಎಸಳು ಬೆಳ್ಳುಳ್ಳಿ, ಸಾಸಿವೆ ಜೀರಿಗೆ, ಕಾಳುಮೆಣಸಿನ ಪುಡಿ, ಕರಿಬೇವು, ಅರಿಶಿಣ, ಇಂಗು ಹಾಕಿ ಹುರಿದುಕೊಳ್ಳಿ. ನಂತರ ಅದಕ್ಕೆ ಒಂದು ೫ ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಚಾಪಾತಿಯನ್ನು ಶಂಕರಪೋಳೆ ಆಕಾರಕ್ಕೆ ಸಣ್ಣದಾಗಿ ಪೀಸ್ ಮಾಡಿಕೊಳ್ಳಿ. ಇದನ್ನು ಕುದಿಯುತ್ತಿರುವ ಒಗ್ಗರಣೆ ನೀರಿಗೆ ಹಾಕಿ. ೧೫ ನಿಮಿಷ ಮತ್ತೆ ಕುದಿಸಿ. ಸೂಪ್ ದಪ್ಪವಾಗುತ್ತದೆ. ನಂತರ ಲಿಂಬು, ಉಪ್ಪು, ಸಕ್ಕರೆ, ಕೊತ್ತುಂಬರಿ ಸೊಪ್ಪು ಹಾಕಿ ಮುಚ್ಚಿಡಿ. ಸ್ವಲ್ಪ ತಣ್ಣಗಾದ ಮೇಲೆ ಸೇವಿಸಿಬಹುದು.