Sunday, April 11, 2021

Latest Posts

ತಿದ್ದಿಕೊಳ್ಳದಿದ್ದರೆ ನಿಮಗೆ ಚಟ್ಟ ಕಟ್ಟುವುದು ಖಂಡಿತ: ಜಿಹಾದಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಯೋಗಿ ಆದಿತ್ಯನಾಥ್

ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಹಾದಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದು, ನೀವು ತಿದ್ದಿಕೊಳ್ಳದಿದ್ದರೆ ನಿಮಗೆ ಚಟ್ಟ ಕಟ್ಟುವುದು ಖಂಡಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಲವ್ ಜಿಹಾದ್ ವಿರುದ್ಧ ಗುಡುಗಿದ್ದಾರೆ. ‘ ಮದುವೆ ಆಗಲು ಮತಾಂತರ ಆಗಬೇಕಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್​ ಹೇಳಿದೆ. ಅದಾಗ್ಯೂ ಗುರುತು ಮರೆಮಾಚಿ ಹಿಂದೂ ಸೋದರಿಯರ ಜೀವನದ ಜತೆ ಚೆಲ್ಲಾಟ ಆಡಲಾಗುತ್ತಿದೆ. ಹೀಗಾಗಿ ಲವ್ ಜಿಹಾದ್ ವಿರುದ್ಧ ಸರ್ಕಾರ ಕಠಿಣವಾದ ಕಾನೂನೊಂದನ್ನು ಮಾಡಲಿದೆ. ಲವ್ ಜಿಹಾದ್​ ನಡೆಸುವವರು ತಿದ್ದಿಕೊಳ್ಳದಿದ್ದರೆ ಅವರ ರಾಮ್​ ನಾಮ್ ಸತ್ಯ ಯಾತ್ರೆ (ಅಂತಿಮಯಾತ್ರೆ) ಶುರುವಾಗುತ್ತದೆ ಎಂದು ಸಿಎಂ ಯೋಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss