Sunday, July 3, 2022

Latest Posts

ತಿರುವನಂತಪುರಂ ಆರ್‌ಜಿಸಿಬಿಯ 2ನೇ ಕ್ಯಾಂಪಸ್‌ಗೆ ‘ಗುರೂಜಿ’ ಹೆಸರು: ಕೇಂದ್ರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದ ಮಹತ್ವದ ಜ್ಞಾನ ಕೇಂದ್ರ ಮತ್ತು ಅತ್ಯುನ್ನತ ಮಟ್ಟದ ಶೋಧ ಕೇಂದ್ರವೆಂದೇ ಗೌರವಕ್ಕೆ ಪಾತ್ರವಾಗಿರುವ ರಾಜೀವ್‌ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ(ಆರ್‌ಜಿಸಿಬಿ)ಯ ಎರಡನೇ ಕ್ಯಾಂಪಸ್ ಈಗ ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಇದಕ್ಕೆ ಖ್ಯಾತ ಚಿಂತಕರೂ , ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕ್ ಕೂಡಾ ಆಗಿದ್ದ ಮಾಧವ ಸದಾಶಿವ ಗೋಳ್ವಲ್ಕರ್(ಗುರೂಜಿ)ಅವರ ಹೆಸರನ್ನು ಇಡಲಾಗಿದೆ.
ಈ ಮಹತ್ವದ ಸಂಶೋಧನಾ ಕೇಂದ್ರಕ್ಕೆ “ಶ್ರೀ ಗುರೂಜಿ ಮಾಧವ್ ಸದಾಶಿವ ಗೋಳ್ವಲ್ಕರ್ ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲೆಕ್ಸ್ ಡಿಸೀಸ್ ಅಂಡ್ ವೈರಲ್ ಇನ್ಪೆಕ್ಷನ್ “ಎಂದು ಹೆಸರಿಸಲು ನನಗೆ ಹರ್ಷವಾಗುತ್ತದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಶುಕ್ರವಾರ ತಿಳಿಸಿದರು. ಅವರು ಡಿ.೨೨ರಿಂದ ೨೫ರವರೆಗೆ ಆನ್‌ಲೈನ್ ಮೂಲಕ ನಡೆಯಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಸೈನ್ಸ್ ಫೆಸ್ಟಿವಲ್(ಐಐಎಸ್‌ಎಫ್)ನ ಆರನೇ ಆವೃತ್ತಿಯ ಪೂರ್ವಭಾವಿ ಅವೇಶನದಲ್ಲಿ ಮಾತನಾಡುತ್ತಿದ್ದರು.
ಈ ಕ್ಯಾಂಪಸ್ ಅದ್ವಿತೀಯ ಜ್ಞಾನಕೇಂದ್ರ ಮತ್ತು ಮಧ್ಯಮ ಹಾಗೂ ಉನ್ನತ ಮಟ್ಟದ ಸಂಶೋಧನಾ ಕೇಂದ್ರವಾಗಿರಲಿದೆ.ಇದು ಆಳ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಬಹು ವಿಷಯಗಳ ಕೋರ್ಸ್‌ಗಳನ್ನು ಒಳಗೊಂಡಿರಲಿದೆ. ಸ್ಟೇಟ್-ಆಫ್ -ದ -ಆರ್ಟ್ ‘ಅಡ್ವಾನ್ಸ್‌ಡ್ ಸೆಂಟರ್ ಫಾರ್ ಮೊಲೆಕ್ಯುಲರ್ ಅಂಡ್ ಸೆಲ್ಯುಲರ್ ಥೆರಪ್ಯುಟಿಕ್ಸ್”ಕೇಂದ್ರವಾಗಿರುವ ಈ ಕ್ಯಾಂಪಸ್,ಕ್ಯಾನ್ಸರ್ ಔಷ ಮತ್ತು ಇಮ್ಯುನೋಥೆರಫೆಯುಟಿಕ್ಸ್‌ಗೆ ಸಂಬಂಧಿಸಿ ಒಯೆರ್ ಕಟಿಂಗ್ ಟೆಕ್ನಾಲಜೀಸ್, ಥೆರಪೀಸ್, ಕ್ಲಿನಿಕಲ್ ಟ್ರಯಲ್ಸ್‌ನಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ.
ಇಲ್ಲಿ ಸ್ಟೆಮ್ ಸೆಲ್ ರಿಪ್ಲೇಸ್‌ಮೆಂಟ್, ಜೀನ್ ಥೆರಪಿ, ಮೊಲೆಕ್ಯುಲರ್ ಟ್ಯೂಮರ್ ಪರೀಕ್ಷೆಯ ಸೌಕರ್ಯಗಳನ್ನು ಹೊಂದಿರಲಿದೆ.ದೇಶದಲ್ಲಿ ಬಯೋಟೆಕ್ನಾಲಜಿ ಅಭಿವೃದ್ಧಿಗೆ ಈ ಕೇಂದ್ರ ಮಹತ್ವದ ಕೊಡುಗೆ ನೀಡಲಿರುವುದು ನಿಶ್ಚಿತ ಎಂಬುದಾಗಿ ಡಾ.ಹರ್ಷವರ್ಧನ್ ತಿಳಿಸಿದರು. ಐಐಎಸ್‌ಎಫ್೨೦೨೦ರ ಮುಖ್ಯ ಘೋಷವಾಕ್ಯವೇ ‘ಆತ್ಮ ನಿರ್ಭರ್’ಆಗಿರಲಿದೆ ಎಂದರು.
ಇದೊಂದು ದೇಶದ ವಿಜ್ಞಾನ ಯಾತ್ರೆಯಲ್ಲಿ ಅನನ್ಯ ಕಾರ್ಯಕ್ರಮವಾಗಿರಲಿದೆ ಎಂಬುದಾಗಿ ಬಯೋಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿಡಾ.ರೇಣು ಸ್ವರೂಪ್ ತಿಳಿಸಿದ್ದಾರೆ. ವಿಜ್ಞಾನ ಭಾರತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಜಯಂತ್ ಸಹಸ್ರಬುದ್ಧೆ ಅವರು ಈ ಕೇಂದ್ರ ದೇಶದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss