Thursday, August 11, 2022

Latest Posts

ತಿರುವನಂತಪುರ ಸೆಕ್ರೇಟರಿಯೇಟ್ ನಲ್ಲಿ ಬೆಂಕಿ ಅವಘಡ: ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಕೇಳಿದ್ದ ಫೈಲ್‌ಗಳು ಸುಟ್ಟು ಭಸ್ಮ!

ತಿರುವನಂತಪುರ:  ಸೆಕ್ರೆಟರಿಯೇಟ್ ಪ್ರೋಟೋಕಾಲ್ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ,
ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಕೋರಿದ್ದ ನಿರ್ಣಾಯಕ ಫೈಲ್‌ಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗುತ್ತಿದೆ.
ಸ್ಥಳೀಯಾಡಳಿತ ಇಲಾಖೆ ಕಾರ್ಯ ನಿರ್ವಹಿಸುವ ನೋರ್ತ್ ಸ್ಯಾಂಡ್‌ವಿಚ್ ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಿನ್ನ ಕಳ್ಳ ಸಾಗಾಟ ಪ್ರಕರಣ ಸೇರಿದಂತೆ ಕೆಲವು ನಿರ್ಣಾಯಕ ಫೈಲ್‌ಗಳು ಮತ್ತು ಕಂಪ್ಯೂಟರ್ ಗಳು ಸುಟ್ಟು ನಾಶವಾಗಿವೆ ಎಂದು ವರದಿಗಳು ತಿಳಿಸುತ್ತಿವೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಬಳಿಕ ಚೆಂಗಲ್ ಚುಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.
ಪ್ರೋಟೋಕಾಲ್ ಪ್ರಧಾನ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ಹೇಳಲಾಗುತ್ತಿದೆ. ಸುಟ್ಟ ಫೈಲ್‌ಗಳು ಯಾವುವು ಎಂಬುದು ಸ್ಪಷ್ಟವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ರಾಜಕೀಯ ವಿಭಾಗದ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿದ್ದಾಗಿದೆ. ಪ್ರೋಟೋಕಾಲ್ ಅಧಿಕಾರಿಯ ಕಚೇರಿ ಕೂಡ ಇಲ್ಲಿದೆ. ಚಿನ್ನ ಕಳ್ಳ ಸಾಗಣೆಗೆ ಸಂಬಂಧಿಸಿ ಎನ್‌ಐಎ ಕೇಳಿದ್ದ ವೀಡಿಯೋ ದೃಶ್ಯಗಳು ಮತ್ತು ಫೈಲ್‌ಗಳನ್ನು ಪ್ರೋಟೋಕಾಲ್ ಕಚೇರಿಯಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss