ಮೈಸೂರು: ಮೈಸೂರಿನಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ತುಂಬಾ ಅಗತ್ಯವಿದ್ರೆ ಮಾತ್ರ ಹೋಂ ಐಸೋಲೇಷನ್ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಂ ಐಸೋಲೇಷನ್ ಪಡೆಯುವವರ ಸಂಖ್ಯೆ ಹೆಚ್ಚಾಳವಾಗುತ್ತಿದೆ. ಇನ್ನೂ ಹೆಚ್ವು ಅವಕಾಶ ಕೊಟ್ರೆ ಸೋಂಕು ಮತ್ತಷ್ಟು ಹರುಡುವ ಸಾಧ್ಯತೆ ಇದೆ. ಹೀಗಾಗಿ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಲಾಗುತ್ತೆ.
ಕಳೆದ ಎರಡು ಮೂರು ದಿನಗಳಿಂದ ಹೋಂ ಐಸೋಲೇಷನ್ ಪಡೆಯುವವರ ಸಂಖ್ಯೆ ೨೦ ರಷ್ಟಿತ್ತು.ಆದರೆ ಮಂಗಳವಾರ ಒಂದೇ ದಿನ ಶೇ. ೫೦ ಕ್ಕೇರಿದೆ. ಜೊತೆಗೆ ಮೈಸೂರಿನಲ್ಲಿ ಡೆತ್ ರೇಟ್ ಸಹ ಹೆಚ್ಚಾಗಿದೆ. ಹೋಂ ಐಸೋಲೇಷನ್ ಗೈಡ್ ಲೈನ್ಸ್ನ್ನ ಚಾಚು ತಪ್ಪದೆ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೊಂಕೀತರಿಗೆ ಎಲ್ಲಾ ವ್ಯವಸ್ಥೆ ಸರಿ ಇದ್ದು ತೀರ ಅಗತ್ಯ ಇದ್ದರೆ ಮಾತ್ರ ಹೋಂ ಐಸೋಲೇಷನ್ ಗೆ ಅವಕಾಶ ನೀಡಲಾಗುತ್ತೆ ಎಂದು ತಿಳಿಸಿದರು.
ಎನ್ ಆರ್ ಕ್ಷೇತ್ರದಲ್ಲಿ ಹೆಲ್ತ್ ಕ್ಯಾಂಪ್ ಮಾಡುವುದು ಸದ್ಯಕ್ಕೆ ಕೈಬಿಡಲಾಗಿದೆ. ವೈದಕೀಯ ತಂಡದವರು ಮನೆಮನೆಗೆ ತೆರಳಿ ಶಂಕಿತರ ಸ್ವಾಬ್ ಕಲೆಕ್ಟ್ ಮಾಡುತ್ತಾರೆ. ಸದ್ಯಕ್ಕೆ ೨೩೦೦ ಆಂಟಿಜೆನ್ ಕಿಟ್ ಇದೆ. ಅಲ್ಲಿ ಇನ್ನೂ ಹೆಚ್ಚಿನ ಕಿಟ್ ಬೇಕಾಗುತ್ತೆ. ಇದನ್ನ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು. ಎನ್.ಆರ್.ಕ್ಷೇತ್ರದಲ್ಲಿ ಎಲ್ಲೆಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂಬುದರ ಗಡಿ ಗುರುತಿಸಲಾಗಿದೆ. ಮೂರು ವೈದ್ಯಕೀಯ ತಂಡ ಗುರುವಾರದಿಂದ ಕೆಲಸ ಮಾಡಲಿವೆ ಎಂದು ಮಾಹಿತಿ ನೀಡಿದರು.