ಪ್ರೀತಿಯಿಂದ ತಂದ ಹೊಸ ಬಟ್ಟೆಗಳು ಮೊದಲನೇ ವಾಶ್ ನಲ್ಲಿಯೇ ಬಣ್ಣ ಬಿಟ್ಟು ಕಲರ್ ಡಿಮ್ ಆಗುವುದು ಸಹಜ. ಆದರೆ, ಬಟ್ಟೆಗಳ ಬಣ್ಣ ಹೋಗಬಾರದೆಂದರೆ ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ ನೋಡಿ..
ಬಟ್ಟೆಯ ಟ್ಯಾಗ್: ಎಲ್ಲಾ ಬಟ್ಟೆಗಳಿಗೂ ಟ್ಯಾಗ್ ಇರುತ್ತದೆ. ಬಟ್ಟೆಯನ್ನು ಯಾವ ರೀತಿ ವಾಶ್ ಆಡಬೇಕು ಎಂಬುದರ ಕುರಿತು ಮಾಹಿತಿ ಕೊಟ್ಟಿರುತ್ತಾರೆ. ಅದನ್ನು ಅನುಸರಿಸುವುದರಿಂದಲೂ ಬಟ್ಟೆಯನ್ನು ದೀರ್ಘಕಾಲ ಬಳಸಲು ಸಾಧ್ಯವಾಗುತ್ತದೆ.
ತಂಪಾದ ನೀರು: ಬಿಸಿ ನೀರು ಅಥವಾ ಬೆಚ್ಚಗಿನ ನೀರಿನಲ್ಲಿ ಬಟ್ಟೆ ಒಗೆದರೆ ಬಣ್ಣ ಹೋಗುವ ಸಾಧ್ಯತೆಗಳು ಹೆಚ್ಚು ಹಾಗಾಗಿ ಕೋಲ್ಡ್ ವಾಟರ್ ನಲ್ಲಿ ಬಟ್ಟೆಯನ್ನು ನೆನೆಸುವುದು ಉತ್ತಮ.
ಬಣ್ಣ ಬೇರ್ಪಡಿಸಿ: ಬಟ್ಟೆ ಒಗೆಯುವಾಗ ಡಾರ್ಕ್ ಕಲರ್ ಹಾಗೂ ಲೈಟ್ ಕಲರ್ ಗಳನ್ನು ಬೇರ್ಪಡಿಸಿ ಒಗೆಯುವುದರಿಂದ ಬಟ್ಟೆಯ ಬಣ್ಣ ಬಿಟ್ಟರೂ ಬೇರೆ ಬಟ್ಟೆಗಳಿಗೆ ಅಂಟುವುದಿಲ್ಲ.
ವೆನಿಗರ್: ಮಷೀನ್ ಗೆ ಒಂದು ಕಪ್ ವೆನಿಗರ್ ಹಾಕುವುದರಿಂದ ಬಟ್ಟೆ ಬಣ್ಣ ಬಿಡುವುದಿಲ್ಲ.
ಉಪ್ಪು: ಬಟ್ಟೆಯನ್ನು ವಾಶ್ ಗೆ ಹಾಕುವಾಗ ಸ್ವಲ್ಪ ಉಪ್ಪು ಹಾಕುವುದರಿಂದಲೂ ಬಣ್ಣ ಬಿಡುವುದು ಕ್ರಮೇಣ ಇಳಿಕೆಯಾಗುವುದು.