ಮೈಸೂರು : ಜಿಲ್ಲೆಯ ನಂಜನಗೂಡಿನ ಶ್ರೀರಾಂಪುರ ಬಡಾವಣೆಯ ನಿವಾಸಿ ವೃದ್ದನೊಬ್ಬ ಹೆಜ್ಜಿಗೆ ಸೇತುವೆಯಿಂಬ ತುಂಬಿ ಹರಿಯುತ್ತಿರುವ ಕಪಿಲ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮುದ್ದುಮಾದ ಬಿನ್ ಮಾದಯ್ಯ (62) ಎಂಬಾತನೇ ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ.
ಮೃತ ಮುದ್ದುಮಾದ ಅನಾರೋಗ್ಯದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನೆನ್ನೆಯಷ್ಠೇ ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಕರೆತರಲಾಗಿತ್ತು.
ಎಂದಿನಂತೆ ಮುಂಜಾನೆ ಆಕ್ಟೀವ್ ಹೋಂಡಾದಲ್ಲಿ ಮನೆಯಿಂದ ಹೋದವರು ಮನೆಗೆ ಬಾರದ ಕಾರಣ ಕುಟುಂಬ ಸದಸ್ಯರು ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವೇ ದೊರೆಯಲಿಲ್ಲಾ ನಂತರ ಅವರ ಹೋಂಡಾ ಗಾಡಿ ಚಾಮರಾಜನಗರ ಭೈಪಾಸ್ ರಸ್ತೆಯ ಹೆಜ್ಜಿಗೆ ಸೇತುವೆ ಬಳಿ ನಿಂತಿರುವುದು ಗೊತ್ತಾದರೂ ಆದರೆ ಮುದ್ದುಮಾದರವರ ಸುಳಿವೇ ಸಿಗಲಿಲ್ಲಾ ಗಾಬರಿಗೊಂಡ ಕುಟುಂಬದವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಿಎಸೈ ರವಿಕುಮಾರ್ ಕಾರ್ಯನ್ಮೋಖರಾಗಿ ಅಗ್ನಿಶಾಮಕ ದಳದ ಸಹಕಾರದಿಂದ ಬೋಟು ಮತ್ತು ನುರಿತ ಈಜುಗಾರರ ಸಹಾಯದಿಂದ ಮುದ್ದುಮಾದರನ್ನು ಪತ್ತೆ ಹಚ್ಚಲು ಶೋಧನ ಕಾರ್ಯ ನಡೆಯುತ್ತಿದೆ.