Sunday, June 26, 2022

Latest Posts

ತುಮಕೂರು| ಇಂದು ಒಂದೇ ದಿನದ ನಾಲ್ಕು ಪಾಸಿಟೀವ್ ಪ್ರಕರಣ, ಆತಂಕದಲ್ಲಿ ಜನತೆ

ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನದ ನಾಲ್ಕು ಪಾಸಿಟೀವ್ ಪ್ರಕರಣಗಳು ಪತ್ತೆ ಯಾಗುವ ಮೂಲಕ ಜಿಲ್ಲೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ.
ಪಾದರಾಯನಪುರದಿಂದ ಶಿರಾಕ್ಕೆ ಜ ಿಲ್ಲಾಡಳಿತದ ಗಮನಕ್ಕೇ ಬರದಂತೆ ಬಂದ ವ್ಯಕ್ತಿಗೆ ಪಾಸಿಟೀವ್ ಬಂದಿದ್ದಾರೆ. ಇದುವರೆಗೆ ಕರೊನ ಮುಕ್ತವಾಗಿದ್ದ ಪಾವಗಡದಲ್ಲಿ ಒಂದೇ ದಿನ ಮೂರು ಪಾಸಿಟೀವ್ ಪ್ರಕರಣಗಳು ದಾಖಲಾಗಿದೆ.
ಮೇ 4ರಂದು ಗುಜರಾತ್ ನ ಅಹಮದಾಬಾದ್ ನಿಂದ ಚಿತ್ರದುರ್ಗಕ್ಕೆ ಒಂದೇ ಬಸ್ಸಿನಲ್ಲಿ ಬಂದ 33 ತಬ್ಲಿಗಳ ಪೈಕಿ 13 ಮಂದಿ ಪಾವಗಡದಲ್ಲಿ ತಾಲೂಕಿನ ವೈ.ಎನ್. ಹೊಸ ಕೋಟೆ ಯವರಿದ್ದು ಅವರನ್ನು ಪಾವಗಡದ ಹಾಸ್ಟೆಲಿನಲ್ಲೀ ಕ್ವಾರಂಟೈನ್ ಮಾಡಲಾಗಿತ್ತು .ಅವರ ಪೈಕಿ ಮೂವರನ್ನು ಪಾಸಿಟೀವ್ ಎಂದು ತುಮಕೂರು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಜೊತೆಯಲ್ಲಿ ಚಿತ್ರದುರ್ಗಕ್ಕೆ ಬಂದ ಮೂವರಿಗೇ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಪಾವಗಡದಲ್ಲಿ ಹಾಸ್ಟೆಲಿನಲ್ಲಿದ್ಧವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ಬೆಳಕಿಗೆ ಬಂದಿದೆ. ಒಟ್ಟಾರೆ ಇದುವರೆಗೆ ಜಿಲ್ಲೆಯಲ್ಲಿ 11ಪಾಸಿಟೀವ್ ಇದ್ದು ಇಬ್ಬರು ಮೃತರಾಗಿದ್ದು. ಇಬ್ಬರು ಗುಣಮುಖರಾಗಿದ್ದು, 7ಮಂದಿ ಆಸ್ಪತ್ರೆಯಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss