ತುಮಕೂರು: ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊವಿಡ್ ಪಾಸಿಟೀವ್ ಪ್ರಕರಣ ದೃಢಪಟ್ಟಿದೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಮೇಟಗಳ್ಳಿಯ ಈ ವ್ಯಕ್ತಿ ಮುಂಬೈ ನಲ್ಲಿ ಹೋಟೆಲ್ ಒಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು ಮೇ 24 ರಂದು ತುಮಕೂರಿಗೆ ಬಂದಿದ್ದು ಅಂದು ಕಫ್ಯೂ ಇದ್ದ ಪರಿಣಾಮ ಮುಂದೆ ಪ್ರಯಾಣ ಬೆಳಸದೆ ಕೊವಿಡ್ ಆಸ್ಪತ್ರೆಗೆ ಬಂದಿದ್ದರು.
ಅವರ ಗಂಟಲು ದ್ರವ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಅದು ಇಂದು ಪಾಸಿಟೀವ್ ಬಂದಿದೆ. ಸದರಿ ವ್ಯಕ್ತಿಗೆ ಜ್ವರ, ಉಸಿರಾಟದ ತೊಂದರೆಯಿಲ್ಲ ಆರಾಮಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.