ತುಮಕೂರು: ತುಮಕೂರು ಸೆನ್ ಪೊಲೀಸರು ತುಮಕೂರು ತಾಲೂಕಿನ ಊರ್ಡಿಗೆರೆಯಲ್ಲಿ ಇಬ್ಬರನ್ನು ಬಂಧಿಸಿ ಅವರಿಂದ 2.820ಕೆ.ಜಿ.ಹಸಿಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲೆಯ ಪೊಲೀಸ್ ಮುಖ್ಯಾಧಿಕಾರಿ
ಡಾ.ಕೋನಾ ವಂಸಿಕೃಷ್ಣ ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಂದು ಬೆಳಿಗ್ಗೆ 8 ಗಂಟೆಯಲ್ಲಿ .ಊರ್ಡಿಗೆರೆಯ ಬಸವೇಶ್ವರ ದೇವಸ್ಥಾನದ ರಸ್ತೆಯ ನಿವಾಸಿ ಅಮ್ಜದ್ ಖಾನ್ (35)ಎಂಬ ವ್ಯಕ್ತಿ ತನ್ನ ಬಳಿ ಪ್ಲಾಸ್ಟಿಕ್ ಕವರ್ ನಲ್ಲಿ 400ಗ್ರಾಮ್ ಹಸಿ ಗಾಂಜಾ ಸೊಪ್ಪು ಇಟ್ಟುಕೊಂಡು ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದ ನೆಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಊರ್ಡಿಗೆರೆ ಹೋಬಳಿಗಳ ನಾರಾಯಣಪ್ಪ(65) ಎಂಬವ್ಯಕ್ತಿಯಿಂದ ಈ ಗಾಂಜಾ ಸೊಪ್ಪು ಖರೀದಿಸಿದ್ದಾಗಿ ತಿಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಾರಾಯಣಪ್ಪ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಲಕ್ಷ್ಮೀದೇವಮ್ಮನ ಅವರ ಹೊಲದಲ್ಲಿ ಜೋಳದ ಜೊತೆಗೆ ಜಮೀನು ಮಾಲಿಕರಿಗೆ ಗೊತ್ತಾಗದ ರೀತಿಯಲ್ಲಿ ಗಾಂಜಾ ಬೆಳೆದಿದ್ದಾಗಿ ನಾರಾಯಣಪ್ಪ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ವಂಚಕರು ರೈತರನ್ನು ವಂಚಿಸಿ ಜೋಳ ಮತ್ತು ಇತರಬೆಳೆ ಜೊತೆ ಬೆಳೆದು ರೈತರನ್ನು ವಂಚಿಸುತ್ತಿದ್ದು ರೈತರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಎಚ್ಚರಿಸಿದ್ದಾರೆ. ಬೇವಿನಪಾಳ್ಯದ ಲಕ್ಷ್ಮೀದೇವಮ್ಮನವರ ಹೊಲದಲ್ಲಿ 2.820ಕೆಜಿ ಗಾಂಜಾ ದೊರಕಿದ್ದು ಒಟ್ಟು 3.220ಕೆಜಿ ಹಸಿ ಗಾಂಜಾ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಇಬ್ಬರನ್ನು ಬಂಧಿಸಿ ದ್ದಾರೆ.