Sunday, June 26, 2022

Latest Posts

ತುಮಕೂರು ಎರಡನೇ ಹಂತದ ಗ್ರಾ.ಪಂ.ಚುನಾವಣೆ: ಶೇ.89.63ರಷ್ಟು ಮತದಾನ

ಹೊಸದಿಗಂತ ವರದಿ,ತುಮಕೂರು:

ಎರಡನೇ ಹಂತದ ಗ್ರಾಮ ಪಂಚಾಯಿತಿಯನ್ನು ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಶೇ.89.63ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಐದು ತಾಲೂಕುಗಳ 161 ಗ್ರಾಮಪಂಚಾಯಿತಿಗಳ 1189 ಕ್ಷೇತ್ರಗಳ 2543 ಸದಸ್ಯ ಸ್ಥಾನಗಳಿಗೆ 1321ಮತಗಟ್ಟೆಗಳಲ್ಲಿ ಎರಡನೆಯ ಹಂತದಲ್ಲಿ ಡಿಸೆಂಬರ್ 27ರಂದು ಮತದಾನ ನಡೆಯಿತು.

ಚಿ.ನಾ.ಹಳ್ಳಿ –ಶೇ.88.54.ತಿಪಟೂರು –ಶೇ.89.14. ತುರುವೇಕೆರೆ–ಶೇ.90.70,ಶಿರಾ –ಶೇ.90.89 ಮತ್ತು ಮಧುಗಿರಿ –ಶೇ.88.88ರಷ್ಟು ಮತದಾನವಾಗಿದೆ.ಮೊದಲ ಹಂತದಲ್ಲಿ ಐದು ತಾಲೂಕುಗಳಲ್ಲಿ ಶೇ.88.50ರಷ್ಟು ಮತದಾನವಾಗಿತ್ತು.ಮತಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಡಿಸೆಂಬರ್ 30ರಂದು ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss