Saturday, August 13, 2022

Latest Posts

ತುಮಕೂರು ಒಂದೇ ದಿನ ಒಂಬತ್ತು ಪಾಸಿಟೀವ್ ಪ್ರಕರಣಗಳು: ಜಿಲ್ಲಾ ಅಧಿಕಾರಿ ಡಾ.ರಾಕೇಶ್ ಕುಮಾರ್

ತುಮಕೂರು: ಜಿಲ್ಲೆಯಲ್ಲಿ ಕೊವಿಡ್ ಪಾಸಿಟೀವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನತೆ ಭಯಬೀತರಾಗುತ್ತಿದ್ದಾರೇ.
ಇಂದು ಒಂದೇ ದಿನ ಒಂಬತ್ತು ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಅಧಿಕಾರಿಗಳಾದ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಇಂದಿನವರೆಗೆ 25 ಪಾಸಿಟೀವ್ ಪ್ರಕರಣಗಳಾಗಿವೆ. ಒಂಬತ್ತು ಮಂಡಿಯಲ್ಲಿ ಆರು ಮಂದಿ ಮುಂಬೈನಿಂದ ಬಂದವರು. ಇವರಲ್ಲಿ ನಾಲ್ವರು ತುರುವೇಕೆರೆ ತಾಲೂಕಿನವರು. ತುಮಕೂರು ತಾಲೂಕಿಗೆ ಸೇರಿದ 66ವರ್ಷದ ವ್ಯಕ್ತಿಯೊಬ್ಬರು ಡಯಾಬಿಟೀಸ್ ನಿಂದ ಸಿದ್ಧಗಂಗ ಆಸ್ಪತ್ರೆಗೆ ದಾಖಲಾಗಿದ್ದರು ಅವರು ಕೊವಿಡ್ ಪಾಸಿಟೀವ್ ಆಗಿದ್ದು ಅವರನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದಾಶಿವ ನಗರದ 24ವರ್ಷದ ಗರ್ಭಿಣಿ ಗೆ ಪಾಸಿಟೀವ್ ಬಂದಿದ್ದು ಅವರನ್ನು ಬೆಂಗಳೂರಿ ಕಳುಹಿಸಿಕೊಡಲಾಗಿದ್ದು ಆಕೆಗೆ ಹೆರಿಗೆ ಆಗಿದ್ದು ಮಗು -ಬಾಣಂತಿ ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮತ್ತೊಬ್ಬ ದಾಬಸ್ ಪೇಟೆಯನ್ನು 55ವರ್ಷದ ವ್ಯಕ್ತಿಗೆ ಪಾಸಿಟೀವ್ ಬಂದಿದ್ದು ಆತನನ್ನು ಸಹ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಬ್ಬೂರು ಮತ್ತು ಸದಾಶಿವನಗರವನ್ನು ಕಂಟೈನ್ ಮೆಂಟ್ ಪ್ರದೇಶವನ್ನಾಗಿ ಮಾಡಿರುವುದಾಗಿ ಅವರು ತಿಳಿಸಿದರು.

ನಗರದಲ್ಲಿ ಹೊರರಾಜ್ಯದಿಂದ ಬಂದವರಿಂದಾಗಿ ಕೊವಿಡ್ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನತೆ ಮನೆಗಳಿಂದ ಹೊರಬರದೆ ಮನೆಯಲ್ಲಿಯೇ ಇರಬೇಕು. ಕಾರ್ಖಾನೆ ಗಳಿಗೆ ಹೋಗುವವರು ಮಾಸ್ಕ್ ಧರಿಸುವುದರಿಂದ ಜೊತೆಗೆ ತಮ್ಮ ಅಕ್ಕಪಕ್ಕದವರ ಬಗ್ಗೆ ಜಾಗೃತರಾಗಿರಬೇಕು ಎಂದು ಅವರು ನಾಗರಿಕರಿಗೆ ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss