Wednesday, June 29, 2022

Latest Posts

ತುಮಕೂರು| ಕಂಟೈನ್ ಮೆಂಟ್ ವಲಯ ಹೊರತು ಪಡಿಸಿ ಮದ್ಯ, ಇತರೇ ಅಂಗಡಿ ತೆರೆಯಲು ಅನುಮತಿ

ತುಮಕೂರು: ನಗರದಲ್ಲಿ ಕಂಟೈನ್ ಮೆಂಟ್ ವಲಯಗಳಾದ ಪಿ. ಹೆಚ್. ಕಾಲೋನಿ ಮತ್ತು ಕೆ.ಹೆಚ್. ಬಿ. ಕಾಲೋನಿಗಳನ್ನು ಹೊರತು ಪಡಿಸಿ ಇತರೆಡೆಯಲ್ಲಿ ಮದ್ಯದ ಅಂಗಡಿ ಮತ್ತು ಇತರೇ ಅಂಗಡಿ ಗಳನ್ನು ಶುಕ್ರವಾರದಿಂದ ತೆರೆಯಲು ಷರತ್ತು ಬಿದ್ದ ಅನುಮತಿಯನ್ನು ಜಿಲ್ಲಾಡಳಿತ ನೀಡಿದೆ.
ಜಿಲ್ಲಾಉಸ್ತುವಾರಿ ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಕಾಲಕ್ಕೆ ಜಿಲ್ಲಾಡಳಿತ ನೀಡುವ ಸೂಚನೆ ಗಳನ್ನು ಪಾಲಿಸಬೇಕು.ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಮಾತ್ರ ಅಂಗಡಿಗಳನ್ನು ತೆರೆದಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ತುಮಕೂರು ನಗರದ ಒಳಕ್ಕೆ ಬರುವವರ ಬಗ್ಗೆ ಸಂಪೂರ್ಣ ನಿಗಾ ಇಡುವಂತೆ ಸಚಿವರು ಸೂಚಿಸಿದರು.
ಈ ಉನ್ನತ ಸಭೆಯಲ್ಲಿ ತುಮಕೂರು ಶಾಸಕ ಜ್ಯೋತಿ ಗಣೇಶ್. ಜಿಲ್ಲಾಧಿಕಾರಿಗಳು .ಸಿಇಓ.ಎಸ್.ಪಿ. ಡಿ.ಹೆಚ್. ಓ. ಅಪರ ಜಿಲ್ಲಾಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss