Tuesday, August 16, 2022

Latest Posts

ತುಮಕೂರು| ಕೊರೊನಕ್ಕೆ ಮೂರನೆ ಬಲಿ

ತುಮಕೂರು: ಜಿಲ್ಲೆಯಲ್ಲಿ ಕೊರೊನಕ್ಕೆ ಮೂರನೆಯ ಬಲಿಯಾಗಿದೆ. ನೆಲಮಂಗಲ ತಾಲೂಕಿನ ವೀರಸಾಗರದ ಮಹಿಳೆಯೊಬ್ಬರು ಕರೊನಕ್ಕೆ ಬಲಿಯಾದ ಮೂರನೆಯ ವ್ಯಕ್ತಿ.

ವೀರಸಾಗರದ ಈ ಮಹಿಳೆ ಉಸಿರಾಟದ ತೊಂದರೆಯಿಂದ ಮೇ 19ರಂದು ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು ಆಕೆಗೆ ಕ್ಷಯರೋಗವೂ ಇತ್ತು ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ಆಕೆಯ ಗಂಟಲು ಸ್ಥಾನವನ್ನು ತೆಗೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ಫಲಿತಾಂಶ ಮೇ22ರಂದು ಫಾಸಿಟೀವ್ ಎಂದು ಬಂದಿತ್ತು.

ಎರಡು ದಿನಗಳಿಂದ ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದ್ದು ಆಕೆ ಮೇ.24 ರಂದು ರಾತ್ರಿ 8ಗಂಟೆಗೆ ಮೃತರಾಗಿದ್ದಾರೆ. ವೀರಸಾಗರವನ್ನು ಕಂಟೈನ್ ಮೆಂಟ್ ಪ್ರದೇಶವನ್ನಾಗಿ ಮಾಡಿ ಅಲ್ಲಿನವರ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಮತ್ತೊಂದು ಪ್ರಕರಣದಲ್ಲಿ ಮಾಗಡಿ ಡಿಪೋದ ಸರ್ಕಾರಿ ಬಸ್ ಚಾಲಕನಿಗೇ ಪಾಸಿಟೀವ್ ಬಂದಿದೆ. ಈ ವ್ಯಕ್ತಿ ಜಿಲ್ಲೆಯ ಬೆಳ್ಳಾವಿ ಹೋಬಳಿಯ ಮಾವಿನ ಕುಂಟೆ ಗ್ರಾಮದವನಾಗಿದ್ದು.ಆ ಗ್ರಾಮವನ್ನೂ ಕಂಟೈನ್ ಮೆಂಟ್ ಪ್ರದೇಶವನ್ನಾಗಿ ಮಾಡಿ ಆತನ ಮನೆಯಲ್ಲಿಯವರನ್ನು ಐಸೋಲೇಟ್ ಮಾಡಲಾಗಿದೆ. ಗ್ರಾಮದ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss