Wednesday, June 29, 2022

Latest Posts

ತುಮಕೂರು| ಕ್ವಿಂಟಾಲ್ ರಾಗಿ 3,295 ರೂ. ಗೆ ಖರೀದಿ: ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ಹೊಸದಿಗಂತ ವರದಿ, ತುಮಕೂರು:

2020-21ನೇ ಸಾಲಿನಲ್ಲಿ ಜಿಲ್ಲೆಯ ರಾಗಿ ಬೆಳೆಗೆ ಬೆಂಬಲಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಗೆ 3,295 ರೂ.ಗಳಂತೆ ಖರೀದಿಸುವುದಾಗಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಕುಣಿಗಲ್, ತಿಪಟೂರು, ತುರುವೇಕೆರೆ, ಹುಳಿಯಾರು, ಚಿ.ನಾ.ಹಳ್ಳಿ, ಗುಬ್ಬಿ, ಮಧುಗಿರಿ. ತುಮಕೂರು, ಶಿರಾದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು.

ಆಯಾ ಖರೀದಿಕೇಂದ್ರಗಳಲ್ಲಿ ಡಿ.28ರಿಂದ 2021ರಂ ಜನವರಿ 20ರವರೆಗೆ  ಆನ್ಲೈನ್  ಮೂಲಕ ರೈತರು ತಮ್ಮ  ಹೆಸರನ್ನು  ನೋಂದಾಯಿಸಿಕೊಳ್ಳಬೇಕಿದೆ. ರೈತರು ಕೃಷಿ ಇಲಾಖೆ ನೀಡಿರುವ FRUITS ID ಅನ್ನು ಮಾತ್ರ  ಖರೀದಿ ಕೇಂದ್ರಗಳಲ್ಲಿ ಹಾಜರು ಪಡಿಸಿ ತಮ್ಮ  ಹೆಸರನ್ನು  ನೋಂದಾಯಿಸಿಕೊಳ್ಳಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss