ಹೊಸದಿಗಂತ ವರದಿ,ತುಮಕೂರು:
ತುಮಕೂರು ಜಿಲ್ಲೆಗೆ ಹನ್ನೆರಡು ಸಾವಿರ ಡೋಸೇಜ್ ಮೊದಲ ಹಂತದ ಕೊವಿಡ್ ವ್ಯಾಕ್ಸಿನ್ ಬಂದಿಳಿದಿದೆ ಎಂದು ಡಿ.ಹೆಚ್.ಓ.ಡಾ. ನಾಗೇಂದ್ರಪ್ಪ ತಿಳಿಸಿದರು.
ಈ ವ್ಯಾಕ್ಸಿನ್ ಅನ್ನು ಡಿ.ಹೆಚ್. ಓ.ಕಚೇರಿಯಲ್ಲಿ ಶೈತಲೀಕೃತ ವ್ಯಾಕ್ಸಿನ್ ಉಗ್ರಾಣದಲ್ಲಿ ಬಿಗಿ ಪೊಲೀಸ್ ಭದ್ರತೆ ಯಲ್ಲಿ ಸಂಗ್ರಹ ಮಾಡಲಾಗಿದೆ. ಜನವರಿ 16ರಿಂದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹದಿಮೂರು ಸೈಟ್ ಗಳಲ್ಲಿ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಎಚ್ಒ ಡಾ. ನಾಗೇಂದ್ರಪ್ಪ , ಆರ್ ಸಿ ಎಚ್ ಓ ಡಾ. ಕೇಶವರಾಜ್, ಡಿ ಎಸ್ ಓ ಡಾ. ಮೋಹನ ದಾಸ್ ಮತ್ತಿತರರು ಹಾಜರಿದ್ದರು.