ತುಮಕೂರು: ತುಮಕೂರು ಜಿಲ್ಲೆಯಲ್ಲಿಂದು 80 ಮಂದಿ ಗುಣಮುಖರಾಗಿದ್ದು 101 ಮಂದಿ ನೂತನ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಡಿ.ಹೆಚ್.ಓ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇಂದು ತುಮಕೂರು ಗಂಗೋತ್ರಿನಗರದ 52 ವರ್ಷದಪುರುಷ ಮತ್ತು ಮಧುಗಿರಿ ತಾಲೂಕಿನ ಕೋಡಗದಾಳದ 75 ವರ್ಷದ ಮಹಿಳೆ ಮೃತರಾಗಿದ್ದಾರೆ.
5ವರ್ಷದೊಳಗಿನ ನಾಲ್ವರು ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ 9ಪುರುಷರು ಮತ್ತು ನಾಲ್ವರು ಮಹಿಳೆಯರಿಗೆ ಪಾಸಿಟಿವ್ ಆಗಿದೆ.
ಇದುವರೆಗೆ 831 ಮಂದಿ ಗುಣಮುಖರಾಗಿದ್ದಾರೆ. 54 ಮಂದಿ ಮೃತರಾಗಿದ್ದಾರೆ. 833ಸಕ್ರಿಯ 1718ಖಚಿತ ಪ್ರಕರಣಗಳು ಇವೆ..
ಇಂದು ತುಮಕೂರು -40,ತಿಪಟೂರು -21,ಪಾವಗಡ-8,ಗುಬ್ಬಿ -7,ಕೊರಟಗೆರೆ-7,ಕುಣಿಗಲ್ -6,ತುರುವೇಕೆರೆ-4,ಚಿ.ನಾ.ಹಳ್ಳಿ -6,ಮಧುಗಿರಿ -2 ಪ್ರಕರಣಗಳು ದಾಖಲಿಸಲಾಗಿವೆ.