ತುಮಕೂರು: ಜಿಲ್ಲೆಯಲ್ಲಿಂದು 96 ಮಂದಿ ಗುಣಮುಖರಾಗಿದ್ದು 171 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 1789 ಮಂದಿ ಗುಣಮುಖರಾಗಿದ್ದು ,975 ಸಕ್ರಿಯ ಪ್ರಕರಣಗಳು 2850 ಖಚಿತ ಪ್ರಕರಣಗಳು ಇವೆ.ಇಂದು ತುಮಕೂರು ತಾಲೂಕಿನ ಐವರು ತುರುವೇಕೆರೆಯ ಒಬ್ಬರು ಮೃತರಾಗಿದ್ದು ಮೃತರ ಸಂಖ್ಯೆ 86ಆಗಿದೆ. 16ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೆ.
ಇಂದು ಚಿ.ನಾ.ಹಳ್ಳಿ -8,ಗುಬ್ಬಿ 14,ಕೊರಟಗೆರೆ-10,ಕುಣಿಗಲ್ -19,ಮಧುಗಿರಿ -8,ಪಾವಗಡ-9,ಶಿರಾ-27,ತಿಪಟೂರು -16,ತುಮಕೂರು -55,ತುರುವೇಕೆರೆ-5 ಪ್ರಕರಣಗಳು ದಾಖಲಾಗಿವೆ.