Thursday, July 7, 2022

Latest Posts

ತುಮಕೂರು ಜಿಲ್ಲೆಯಲ್ಲಿ ಇಂದು ಹದಿನೈದು ಕೋವಿಡ್ ಪಾಸಿಟಿವ್ ದೃಢ

ತುಮಕೂರು:  ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ ಎಂದು ಡಿ. ಹೆಚ್. ಓ.ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಂದೇ ದಿನ ಹದಿನೈದು ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರು,ಕೊವಿಡ್ ಪ್ರಕರಣಗಳು 73 ಕ್ಕೆ ತಲುಪಿದೆ.ಇಂದು ಒಂದೇ ದಿನ ಶಿರಾದಲ್ಲಿ 3,ತುಮಕೂರಿನಲ್ಲಿ 4,ತಿಪಟೂರಿನಲ್ಲಿ 2,ಪಾವಗಡದಲ್ಲಿ 4. ಗುಬ್ಬಿ ಮತ್ತು ಮಧುಗಿರಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಶಿರಾದಲ್ಲಿ ಪಾಸಿಟಿವ್ ಆಗದಿದ್ದ ಹತ್ತನೆಯ ತರಗತಿ ವಿದ್ಯಾರ್ಥಿ ತಂದೆಯೂ ಪಾಸಿಟಿವ್ ಆಗಿದ್ದಾರೆ.
ಪಾವಗಡ ತಾಲೂಕಿನ ಕಣಿವೇನಹಳ್ಳಿಯ 40ವರ್ಷ ವ್ಯಕ್ತಿ ಪಾಸಿಟಿವ್ ಆಗಿದ್ದು ಅವರು ಜೂನ್ 20ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಿಂದ ಪಾವಗಡಕ್ಕೆ ಬಂದಿದ್ದರು. ಶಿರಾದ 22ವರ್ಷದ ಯುವಕ ಜೂನ್ 20ರಂದು ರಾಜಾಸ್ಥಾನದಿಂದ ಬಂದಿದ್ದರು.ಇವರೆಲ್ಲರನ್ನೂ ಕೋವಿಡ್ಆ ಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss