Wednesday, August 17, 2022

Latest Posts

ತುಮಕೂರು ಜಿಲ್ಲೆಯಲ್ಲಿ ಸೋಮವಾರ 128 ಮಂದಿ ಗುಣಮುಖ, 97 ಮಂದಿಗೆ ಪಾಸಿಟಿವ್ ಕೇಸ್

ಹೊಸ ದಿಗಂತ ವರದಿ, ತುಮಕೂರು:

ತುಮಕೂರು ಜಿಲ್ಲೆಯಲ್ಲಿ ನವೆಂಬರ್ 9ರಂದು 128 ಮಂದಿ ಗುಣಮುಖರಾಗಿದ್ದು, 97ಮಂದಿಗೆ ಪಾಸಿಟೀವ್ ಆಗಿದೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ 19457ಮಂದಿ ಗುಣಮುಖರಾಗಿದ್ದು, 935 ಸಕ್ರಿಯ ಮತ್ತು 20824ಖಚಿತ ಪ್ರಕರಣಗಳಿವೆ . ಇಂದು ಕೊವಿಡ್ ನಿಂದ ಯಾರೂ ಮೃತರಾಗಿಲ್ಲ. ಇದುವರೆಗೆ 261ಮಂದಿ ಮೃತರಾಗಿದ್ದಾರೆ. ಅನ್ಯ ಕಾರಣಗಳಿಗಾಗಿ ಇಂದು ಒಬ್ಬರು
ಸಾವನ್ನಪ್ಪಿದ್ದಾರೆ. ಒಟ್ಟು ಸಾವು 171 ಆಗಿದೆ. ಇದುವರೆಗೆ 432 ಮೃತರಾಗಿದ್ದಾರೆ. 66ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದಿನ ಪಾಸಿಟೀವ್ ತಾಲೂಕು ವಾರು: ಶಿರಾ ಉಪಚುನಾವಣೆಯ ನಂತರ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು .ಅಲ್ಲಿ ರಾಂಡಮ್ ಅಗಿ ಆಂಟಿಜನ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿರಾದಲ್ಲಿ ಇಂದು 16ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದೆ. ಉಳಿದಂತೆ
ಚಿ.ನಾ.ಹಳ್ಳಿ– 5,ಗುಬ್ಬಿ-10,ಕೊರಟಗೆರೆ-12, ಕುಣಿಗಲ್ 7, ಮಧುಗಿರಿ-6, ಪಾವಗಡ-4, ತಿಪಟೂರು 12, ತುಮಕೂರು 18, ತುರುವೇಕೆರೆ-7 ಸೇರಿ 97 ಕೊವಿಡ್ ಪಾಸಿಟೀವ್ ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!