Monday, August 15, 2022

Latest Posts

ತುಮಕೂರು ಜಿಲ್ಲೆಯಲ್ಲಿ 11 ಮಂದಿ ಗುಣಮುಖ, 81 ಹೊಸ ಕೋವಿಡ್ ಪ್ರಕರಣ

ತುಮಕೂರು: ಇಂದು ಜಿಲ್ಲೆಯಲ್ಲಿ ಹನ್ನೊಂದು ಮಂದಿ ಗುಣಮುಖರಾಗಿದ್ದು, 81 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್.ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇಂದು ತುಮಕೂರಿನ ಕೆ.ಹೆಚ್. ಬಿ. ಕಾಲೋನಿಯ 55  ಮತ್ತು ಹೆಗ್ಗೆರೆಯ 63 ವರ್ಷದ ವೃದ್ಧ ಹುಳಿಯಾರಿನ 63 ವರ್ಷ ವೃದ್ಧ ಮತ್ತು ಗುಬ್ಬಿ ತಾಲೂಕಿನ ನಿಟ್ಟೂರಿನ 80 ವರ್ಷದ ವೃದ್ಧೆ ಮೃತರಾಗಿದ್ದಾರೆ.
ಜಿಲ್ಲೆಯಲ್ಲಿ 736ಮಂದಿ ಗುಣಮುಖರಾಗಿದ್ದು, 52 ಮಂದಿ ಮೃತರಾಗಿದ್ದಾರೆ, 844 ಸಕ್ರಿಯ 1617ಖಚಿತ ಪ್ರಕರಣಗಳಿವೆ.ಒಂಬತ್ತು ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೆ.
ಇಂದಿನ ಪ್ರಕರಣಗಳು: ತುಮಕೂರು -38,ಮಧುಗಿರಿ -8,ಚಿ.ನಾ.ಹಳ್ಳಿ -1,ತಿಪಟೂರು -10,ಕುಣಿಗಲ್ -11,ತುರುವೇಕೆರೇ-2,ಶಿರಾ-1,ಪಾವಗಡ-5,ಗುಬ್ಬಿ -4,ಕೊರಟಗೆರೆ-1.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss