ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸೆಪ್ಟಂಬರ್ 19ರಂದು 229ಮಂದಿ ಗುಣಮುಖರಾಗಿದ್ದು 284 ಕೊವಿಡ್ ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 8292 ಮಂದಿ ಗುಣಮುಖರಾಗಿದ್ದು 2184 ಸಕ್ರಿಯ 10721 ಖಚಿತ ಕೊವಿಡ್ ಪಾಸಿಟೀವ್ ಪ್ರಕರಣಗಳು ಇರುವುದಾಗಿ ತಿಳಿಸಿದ್ದಾರೆ. ಇಂದು ಕೊವಿಡ್ ನಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ ಮೃತರಾದವರು 205.ಇಂದು ಕೊವಿಡ್ ಜೊತೆ ಬೇರೆ ಆರೋಗ್ಯ ಸಮಸ್ಯೆಯಿಂದ ಒಬ್ಬರು ಮೃತರಾಗಿದ್ದು ಈ ರೀತಿಯಲ್ಲಿ ಇದುವರೆಗೆ 40ಮಂದಿ ಮೃತರಾಗಿದ್ದಾರೆ. 84 ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದು ಚಿ.ನಾ.ಹಳ್ಳಿ -19,ಗುಬ್ಬಿ -14,ಕೊರಟಗೆರೆ -6,ಕುಣಿಗಲ್-12,ಮಧುಗಿರಿ -13,ಪಾವಗಡ-44,ಶಿರಾ -36,ತಿಪಟೂರು -34,ತುಮಕೂರು -86,ತುರುವೇಕೆರೆ-20 ಸೇರಿ 284 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.