ತುಮಕೂರು:ತುಮಕೂರು ಜಿಲ್ಲೆಯಲ್ಲಿ ಇಂದು 63 ಮಂದಿ ಗುಣಮುಖರಾಗಿದ್ದು, 93 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ಇಂದಿನ 63ಸೇರಿ
ಜಿಲ್ಲೆಯಲ್ಲಿ ಇದುವರೆಗೆ 1110ಮಂದಿ ಗುಣಮುಖರಾಗಿದ್ದು,ಇಂದಿನ ಐವರು ಸೇರಿ 63ಮಂದಿ ಮೃತರಾಗಿದ್ದಾರೆ. ಜಿಲ್ಲೆಯಲ್ಲಿ 908 ಸಕ್ರಿಯ ಪ್ರಕರಣಗಳು ಇದ್ದು 2081ರ ಖಚಿತ ಪ್ರಕರಣಗಳು ಇವೆ.8ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೆ.
ತುಮಕೂರಿನ ಪಿ.ಹೆಚ್.ಕಾಲೋನಿಯ 67 ವ ರ್ಷದ ಪುರುಷ, ಕುಂಟರಾಮನಪಾಳ್ಯದ 70ವರ್ಷದಪುರುಷ,ಸದಾಶಿವ ನಗರದ69ವರ್ಷದ ಪುರುಷ ಮತ್ತು ವಿದ್ಯಾನಗರದ73 ವರ್ಷದ ಮಹಿಳೆ ಹಾಗೂ ಮಧುಗಿರಿ ಕೆ.ಆರ್. ಬಡಾವಣೆಯಲ್ಲಿ 70 ವರ್ಷದ ಪುರುಷ ಮೃತರಾಗಿದ್ದಾರೆ.
ಇಂದಿನ ಪಾಸಿಟೀವ್ ಪ್ರಕರಣಗಳು; ;;;ತುಮಕೂರು -42,ಚಿ.ನಾ.ಹಳ್ಳಿ -1,ಗುಬ್ಬಿ -4,ಕೊರಟಗೆರೆ-10,ಕುಣಿಗಲ್ -11,ಮಧುಗಿರಿ -8,ಪಾವಗಡ-9,ಶಿರಾ-2,ತಿಪಟೂರು -1,ತುರುವೇಕೆರೆ-5.