Friday, August 19, 2022

Latest Posts

ತುಮಕೂರು: ನಾಲ್ಕೈದು ತಿಂಗಳಿನಿಂದ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ತುಮಕೂರು:  ಕಳೆದ ನಾಲ್ಕೈದು ತಿಂಗಳುಗಳಿಂದ ಪಾವಗಡ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬೀಗಹಾಕಿದ್ದ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದವರನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಪಾವಗಡ ತಾಲೂಕಿನ ಜಾಜೂರಾಯನಹಳ್ಳಿಯ ಪ್ರಸ್ತುತ ಅರೇಕ್ಯಾತನಹಳ್ಳಿಯ ಅರುಣ್ಅಲಿಯಾಸ್ ಅರುಣ್ ಕುಮಾರ್ (19)ಮತ್ತು ಕುಮಾರ್ಲಹಳ್ಳಿಯ ಸಂಜು ಆಲಿಯಾಸ್ ಸಂಜೀವ ರಾಯಲು(20) ಎಂಬ ಯುವಕರು ತಾಲೂಕಿನ ಬಿ.ಹೊಸಹಳ್ಳಿ, ಪೋತಗಾನಹಳ್ಳಿ, ಸೇರಿದಂತೆ ಇತರೆ ಹಳ್ಳಿಗಳಲ್ಲಿಯೂ  ನಗ-ನಾಣ್ಕಗಳ ಕಳ್ಳತನ ಮಾಡಿದ್ದರು.

ಇವರ ಬಂಧನದಿಂದ ತಾಲೂಕಿನ ಪಾವಗಡದಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಾಲ್ಕು. ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನ ಆರು.ಅರಸೀಕೆರೆ ಪೊಲೀಸ್ ಠಾಣೆಯಲ್ಲೂ ವ್ಯಾಪ್ತಿಯಲ್ಲಿನ ನಾಲ್ಕು ರಾತ್ರಿ ಮನೆಗಳ್ಳತನಗಳು ಪತ್ತೆಯಾಗಿದೆ. ಕಳ್ಳರಿಂದ 200ಗ್ರಾಂ ಚಿನ್ನದ ವಡವೆ.4.750 ಕೆ.ಜಿ.ಬೆಳ್ಳಿ ವಡವೆ ಗಳನ್ನು ಮತ್ತು 3,93,000 ರೂಗಳ ನಗದು ಸೇರಿದಂತೆ ಒಟ್ಟು 13,50,000 ರೂಗಳ ಮೌಲ್ಯದ ಚಿನ್ನ-ಬೆಳ್ಳಿ ವಡವೆಗಳು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!