ತುಮಕೂರು: ತುಮಕೂರು ಜಿಲ್ಲೆಯಲ್ಲಿ ಬೀಗ ಹಾಕಿದ ಮನೆಗಳ ಕಳ್ಳ ತನ ತಡೆಯಲು ಸಹಾಯಕವಾಗುವ app ಅಭಿವೃದ್ಧಿ ಪಡಿಸಿರುವುದಾಗಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ಕೋನಾ ವಂಸಿಕೃಷ್ಣ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರುಎಲ್ ಹೆಚ್ ಎಂ ಎಸ್ ಹೆಸರಿನ ಈ ಆಫ್ ಯಶಸ್ವಿಯಾದರೆ ರಾಜ್ಯಾದ್ಯಂತ ಇದನ್ನು ವಿಸ್ತಾರ ಮಾಡುವುದಾಗಿ ಪೊಲೀಸ್ ಮಹಾನಿರ್ಧೇಶಕರು ತಮಗೆ ಭರವಸೆ ನೀಡಿರುವುದಾಗಿ ಅವರು ತಿಳಿಸಿದರು.
ಮನೆಗಳಿಗೆ ಮೂರ್ನಾಲ್ಕು ದಿನ ಬೀಗ ಹಾಕಿಕೊಂಡು ಹೋಗುವ ಸಾರ್ವಜನಿಕರು ಮೊದಲೇ ಪೊಲೀಸ್ ಇಲಾಖೆಯಲ್ಲಿ ಹೆಸರು ನೋಂದಾಯಿಸಬೇಕು.ಆಗ ಸಿಸಿಕ್ಯಾಮರ ತಂತ್ರಜ್ಞಾನದ ಮೂಲಕ ಅಂತಹ ಮನೆಗಳ ಮೇಲೆ ಕಣ್ಗಾವಳು ಇಡಲಾಗುವುದು ಎಂದರು.
ಮೊಬೈಲ್ ಆಫ್ ನಲ್ಲಿ ಮನೆಯ ತಮ್ಮ ಸಂಪೂರ್ಣ ವಿವರಗಳನ್ನು ದಾಖಲಿಸಬೇಕು ಎಂದರು. ಈ ಸೇವೆ ಉಚಿತವಾಗಿದ್ದು ಗರಿಷ್ಠ ಹದಿನೈದು ದಿನಗಳು ಈ ಸೇವೆ ದೊರೆಯುತ್ತದೆ ಎಂದರು. ಈಗಾಗಲೇ ನಗರದ ಪ್ರಮುಖ ಬಡಾವಣೆಗಳು ಮತ್ತು ವೃತ್ತ ಗಳಲ್ಲಿ ಐದುಸಾವಿರ ಸಿಸಿ ಕ್ಯಾಮರ ಗಳನ್ನು ಅಳವಡಿಸಲಾಗಿದೆ ಎಂದರು. ಇನ್ನೂ 300ಸ್ಥಳಗಳಲ್ಲಿ ಸಿಸಿಕ್ಯಾಮರ ಅಳವಡಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಉದೇಶ್,ಡಿಎಸ್ ಪಿ ತಿಪ್ಪೇಸ್ವಾಮಿ,ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜೇಗೌಡ ಉಪಸ್ಥಿತರಿದ್ದರು.