ಹೊಸ ದಿಗಂತ ವರದಿ, ತುಮಕೂರು:
ರಾಜ್ಯರಸ್ತೆ ಸಾರಿಗೆ ಸಂಸ್ಥೆಯು ತುಮಕೂರು -ಮಧುಗಿರಿ -ಪಾವಗಡ ನಡುವೆ ಸಂಚರಿಸುವ ತನ್ನ ಬಸ್ ಗಳ ಪ್ರಯಾಣ ದರಗಳನ್ನು ಕಡಿಮೆ ಮಾಡಿರುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಫಕ್ರುದ್ದಿನ್ ತಿಳಿಸಿದ್ದಾರೆ.
ತುಮಕೂರು -ಮಧುಗಿರಿ ನಡುವಿನ ಪ್ರಯಾಣ ದರಗಳನ್ನು 42ರೂಗಳಿಂದ 35ರೂಗಳಿಗೆ ಇಳಿಸಲಾಗಿದೆ.
ತುಮಕೂರು -ಪಾವಗಡ ನಡುವಿನ ನಿಗದಿತ ನಿಲುಗಡೆಯ ಬಸ್ ಗಳ ಪ್ರಯಾಣ ದರಗಳನ್ನು 47ರೂಗಳಿಂದ 40ರೂಗಳಿಗೆ ಇಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.