ಹೊಸದಿಗಂತ ವರದಿ, ತುಮಕೂರು:
ದೇಶಾದ್ಯಂತ ಕೊರೋನಾ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಕೊರೋನಾ ವ್ಯಾಕ್ಸಿನ್ ಅನ್ನು ಮೊದಲು ವೈದ್ಯರೇ ಪಡೆದಿರುವುದು ವಿಶೇಷವಾಗಿದೆ.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ ಅವರಿಗೆ ಪ್ರಥಮ ಲಸಿಕೆ ಮತ್ತು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ಅವರಿಗೆ ದ್ವಿತೀಯ ಲಸಿಕೆ ನೀಡುವ ಮೂಲಕ ಲಸಿಕೆ ಕುರಿತು ಜನರಲ್ಲಿ ಭರವಸೆ ಮೂಡಿಸಿದಂತಾಗಿದೆ.