Friday, July 1, 2022

Latest Posts

ತುಮಕೂರು| ಲಾಕ್ ಡೌನ್ ನಿಯಮ ಕಟ್ಟುನಿಟ್ಟಾಗಿ ಜಾರಿ- ಸಂತೆ, ಜಾತ್ರೆ, ಮದುವೆ ಸಮಾರಂಭಗಳಿಗೆ ಅವಕಾಶವಿಲ್ಲ

ತುಮಕೂರು: ಜಿಲ್ಲೆಯು ಕಿತ್ತಳೆ ವಲಯದಲ್ಲಿ ಬರುವುದರಿಂದ ತುಮಕೂರು ನೆಲದಲ್ಲಿಯೇ ಕೊವಿಡ್ ಪ್ರಕರಣಗಳು ಹೆಚ್ಚಿರುವ ಪರಿಣಾಮ ನಗರದಲ್ಲಿ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಗರ ಹೊರತು ಪಡಿಸಿದರೆ ಜಿಲ್ಲೆಯ ಇತರೆ ಪ್ರದೇಶದಲ್ಲಿ ಮಧ್ಯ ದ ಅಂಗಡಿಯೂ ಸೇರಿದಂತೆ ಇತರೆ ವ್ಯಾಪಾರೋಧ್ಯಮಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಸಂತೆ. ಜಾತ್ರೆ. ಮದುವೆ ಸಮಾರಂಭಗಳಿಗೆ ಅವಕಾಶ ವಿಲ್ಲ. ಎಲ್ಲಾ ಕಡೇ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ. ನಗರ ಹೊರತು ಪಡಿ ಸಿ ಬೇರೆಡೆ ಸಲೂನ್ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ನಗರದಲ್ಲಿ ಸ್ಪಷ್ಟವಾಗಿ ನಿಯಮಗಳನ್ನು ರೂಪಿಸಿದ ನಂತರ ಅವಕಾಶ ಮಾಡಿಕೊಡಲಾಗುವುದು ಎಂದ ರು. ಜಿಲ್ಲೆಯಿಂದ ಹೊರಜಿಲ್ಲೆಗಳಿಗೇ ಹೋಗಲು ಕಾರ್ಮಿಕರಿಗೆ ಮೇ 4ರಂದು ಬೆಳಗ್ಗೆ 9 ರಿಂದ ಬಸ್ ನಿಲ್ದಾಣ ದಿಂದ ಜಿಲ್ಲಾ ಡಳೀತ ಬಸ್ ಗಳ ವ್ಯವಸ್ಥೆ ಮಾಡಲಿದೆ. ಆಧಾರ್ ಕಾರ್ಡ್ ಕಡ್ಡಾಯ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss