Thursday, August 18, 2022

Latest Posts

ತುಮಕೂರು: ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ: ಜಿಲ್ಲಾ ಬಿಜೆಪಿಯಿಂದ ಆರೋಪ

ತುಮಕೂರು: ಕೃಷಿಕರ ಮತ್ತು ಕೃಷಿ ಕ್ಷೇತ್ರದ ಸುಧಾರಣೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಡಿಗಳು ರೈತರ ಪರವಾಗಿದ್ದು ಈ ಕಾಯ್ದೆಗಳನ್ನು ಅರ್ಥ ಮಾಡಿ ಕೊಳ್ಳದ ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುರೇಶ್ ಗೌಡ ಮತ್ತು ರಾಜ್ಯ ರೈತಮೋರ್ಚ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ಕಾಯ್ದೆ ರೈತರಿಗೆ ತಾವು ಬೆಳೆದ ಬೆಳೆಯನ್ನು ಅವರಿಗೆ ಇಷ್ಟ ಬಂದ ಕಡೆ ಮಾರಾಟ ಮಾಡಲು ಅವಕಾಶ ನೀಡುತ್ತದೆ ಎಂದರು.ಪರ್ಯಾಯ ವ್ಯಾಪಾರ ವ್ಯವಸ್ಥೆಗಳ ಮೂಲಕ ರೈತರ ತಾವು ಬೆಳೆದ ಬೆಳೆಗೆ ತಾವೇ ಧರನಿಗಧಿಪಡಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ರೈತರಬೆಲೆ ಭರವಸೆ ಮತ್ತು ಸೇವಾಒಪ್ಪಂದ ಮಸೂದೆಯಿಂದ ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು.ಚಿಲ್ಲರೆ ವ್ಯಾಪಾರಿಗಳ ಜೊತೆಗೆ ವ್ಯಾಪಾರ ನಡೆಸಲು ರೈತರಿಗೆ ಭದ್ರತೆ ಹಾಗೂ ಪ್ರೋತ್ಸಾಹ ನೀಡುವ ಕೃಷಿ ಒಪ್ಪಂದಗಳ ಕುರಿತು ರಾಷ್ಟ್ರೀಯ ಚೌಕಟ್ಟನ್ನು ರೂಪಿಸಲು ಸಹಕಾರಿಯಾಗಿದೆ ಎಂದರು. ಕೃಷಿ ಉತ್ಪನ್ನಗಳ ಪಾರದರ್ಶಕ.ತಡೆರಹಿತ.ಅಂತರರಾಜ್ಯ ಮತ್ತು ರಾಜ್ಯದೊಳಗಿನ ವ್ಯಾಪಾರಕ್ಕೆ ಉತ್ತೇಜನ ನೀಡಿದೆ ಎಂದರು.

ರೈತರ (ರೈತಕಲ್ಯಾಣ ಮತ್ತು ರಕ್ಷಣೆ )ಬೆಲೆ ಭರವಸೆ ಮತ್ತು ಸೇವಾಒಪ್ಪಂದ ಒಪ್ಪಂದ ಮಸೂದೆಯಿಂದ ರೈತಸಹಕಾರಿಯಾಗಿದೆ ಎಂದರು. ರೈತರಿಗೆ ನ್ಯಾಯಯುತ ಬೆಲೆ ದೊರೆಯಲು ಸಹಕಾರಿಯಾಗಿದೆ ಎಂದರು. ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಲಿವೆ ಎಂದರು.ಕೃಷಿ ಕ್ಷೇತ್ರದಲ್ಲಿ ದೇಶಕ್ಕೆ ಇರುವ ನಿರೀಕ್ಷೆ ಮತ್ತು ಅಗತ್ಯತೆಯನ್ನು ಈ ಮಸೂದೆಗಳು ಪೂರೈಸಲಿವೆ ಎಂದರು. ಉತ್ತಮ ಬೆಳೆ ಬೆಳೆಯಲು ರೈತರಿಗೆ ಉತ್ತೇಜನ ನೀಡಲಿವೆ ಎಂದರು. ಕೃಷಿ ರಫ್ತು ಮಾಡಲೂಬೇಕಾಗುತ್ತದೆ ಈ ಕಾಯ್ದೆಗಳು ಹೆಚ್ಚಿನ ಒತ್ತು ನೀಡಲಿವೆ ಎಂದರು.ಆಧುನಿಕ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹ ದೊರೆಯಲಿದೆ ಎಂದರು. ಕೃಷಿ ವಲಯದಲ್ಲಿ ಸ್ವಾತಂತ್ರ್ಯ ತರುವಲ್ಲಿ, ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಸೆಳೆಯಲು ಈ ಕಾಯ್ದೆಗಳು ಸಹಕಾರಿಯಾಗಿದೆ ಎಂದರು.

ಈ ಮೂರು ಕಾಯ್ದೆಗಳನ್ನು ಸಂಸತ್ತಿನಲ್ಲಿ ಒಪ್ಪಿಗೆ ದೊರೆತಾಗ ವಿಪಕ್ಷಗಳು ಎಬ್ಬಿಸಿದ ಗೊಂದಲ ಮತ್ತು ಕೋಲಾಹಲಗಳು ಸಂವಿಧಾನದ ವಿರೋಧಿ ಕೃತ್ಯಗಳು ಎಂದು ಅವರು ಹೇಳಿದರು.ಈ ಕಾಯ್ದೆಗಳಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ.ನಂದೀಶ್,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಧರ್. ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯಬಿದರೆ. ಜಿಲ್ಲೆಯ ರೈತಮೋರ್ಚ ಅಧ್ಯಕ್ಷರಾದ ಶಿ ಶಂಕರ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!