Sunday, August 14, 2022

Latest Posts

ತುಮಕೂರು| ಸರ್ಕಾರದ ನಿಯಮಗಳ ಉಲ್ಲಂಘಿಸಿ ಕನಕವಳ್ಳಿಯಿಂದ ಹುಳಿಯಾರಿಗೆ ಬಂದಿದ್ದ ನಾಲ್ವರ ವಿರುದ್ಧ ಕೇಸು

ತುಮಕೂರು: ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆ ಪೊಲೀಸರ ಕಣ್ತಪ್ಪಿಸಿ ಮಹಾರಾಷ್ಟ್ರ ರಾಜ್ಯದ ಸಿಂಧೂದುರ್ಗ ಜಿಲ್ಲೆಯ ಕನಕವಳ್ಳಿಯಿಂದ ಜಿಲ್ಲೆಯ ಹುಳಿಯಾರಿಗೆ ಬಂದಿದ್ದ ನಾಲ್ವರ ವಿರುದ್ಧ ಕೇಸು ದಾಖಲಿಸಿರುವ ಜಿಲ್ಲೆಯ ಪೊಲೀಸರು ಅವರನ್ನು ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಐಸೋಲೇಸನ್ನಲ್ಲಿರುವವರು ವಾರ್ಡಿಗೆ ದಾಖಲಿಸಿದ್ದಾರೆ.
ಹುಳಿಯಾರಿನ ಅಶೋಕ,ಮಲ್ಲಿಕಾರ್ಜುನ ಮತ್ತು ಚಂದ್ರ ಮೌಳಿ ಎಂಬುವವರು ಕನಕವಳ್ಳಿಗೆ ಹೋಗಿದ್ದು ಅಲ್ಲಿಂದ ಸರ್ಕಾರಿ ಬಸ್ಸಿನಲ್ಲಿ ನಿಪ್ಪಿಣಿಗೆ ಬಂದಿದ್ದಾರೆ. ಅಲ್ಲಿಂದ ಚೆಕ್ ಪೋಸ್ಟ್ ಗೆ ಬಂದವರು ಅಲ್ಲಿಗೆ ಹುಳಿಯಾರಿನಿಂದ ನರಸಿಂಹ ಮೂರ್ತಿ ಅವರ ಮೂಲಕ ಕೆಎ16ಸಿ1369ಕಾರನ್ನು ತರಿಸಿಕೊಂಡು ಅದರಲ್ಲಿ ಕೆಂಕೆರೆಯ ಕುದುರೆ ಕಣಿವೆಗೆ ಬಂದಿದ್ದಾರೆ. ಅಲ್ಲಿಗೆ ಅಶೋಕನ ತಮ್ಮ ತನ್ನ ಸ್ಕೂಟಿ ತೆಗೆದುಕೊಂಡು ಹೋಗಿ ಒಮ್ಮೆ ಇಬ್ಬರನ್ನು ಮತ್ತೊಮ್ಮೆ ಒಬ್ಬರನ್ನು ಕರೆದುಕೊಂಡು ಬಂದಿದ್ದಾನೆ. ಚೆಕ್ ಪೋಸ್ಟ್ ನಲ್ಲಿ ಸ್ಥಳೀಯರು ತೋಟಕ್ಕೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಊರಿನವರು ಕೇಳಿದರೆ ತೋಟಕ್ಕೆ ಹೋಗಿದ್ದಾಗಿ ಸುಳ್ಳು ಹೇಳಿದ್ದಾರೆ. ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss