Thursday, July 7, 2022

Latest Posts

ತುಮಕೂರು| ಹಳೆ ಮನೆಯಲ್ಲಿ ಗಾಂಜಾ ಸಂಗ್ರಹಿಸಿದ್ದ ವ್ಯಕ್ತಿಯ ಬಂಧನ, 30ಲ.ರೂ. ಮೌಲ್ಯದ ಗಾಂಜಾ ವಶಕ್ಕೆ

ಹೊಸ ದಿಗಂತ ವರದಿ, ತುಮಕೂರು:

ತುಮಕೂರಿನ ತಿಲಕ್ ಪಾರ್ಕ್ ಪೊಲೀಸರು ರಿಯಾಜ್(38)ಎಂಬ ವ್ಯಕ್ತಿಯನ್ನು ಬಂಧಿಸಿ ಅವನಿಂದ 30 ಲಕ್ಷ ರೂಗಳ ಮೌಲ್ಯದ 58.317 ಕೆಜಿ ತೂಕದ 28ಗಾಂಜಾ ಪ್ಯಾಕೇಟ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾಪೊಲೀಸ್ ಮುಖ್ಯಾ ಧಿಕಾರಿ ಯವರು ತಿಳಿಸಿದ್ದಾರೆ.
ಪಿ.ಹೆಚ್. ಕಾಲೋನಿಯ ನಿವಾಸಿಯಾದ ಈ ವ್ಯಕ್ತಿ ಪರೋಟ ವ್ಯಾಪಾರ ಮಾಡಿಕೊಂಡಿದ್ದು.ಸದಾಶಿವ ನಗರದ 7ನೇ ಮುಖ್ಯ ರಸ್ತೆಯ 1ನೇ ಕ್ರಾಸ್ ನಲ್ಲಿನ ಧನುಷ್ ಕಲೆಕ್ಷನ್ ಅಂಗಡಿಯ ಪಕ್ಕದ ಹಳೆಯ ಮನೆಯಲ್ಲಿ ಈ ಗಾಂಜಾ ಸಂಗ್ರಹ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ತಿಲಕ್ ಪಾರ್ಕ್ ಪಿಎಸ್ ಐ ನವೀನ್ ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿ ಗಾಂಜಾ ಮತ್ತು ರಿಯಾಜ್ ನನ್ನು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿಗಳಾದ ಮೊಹಮದ್ ತನ್ವೀರ್. ಇರ್ಷಾದ್.ಆಸೀಮ್.’ ತಲೆಮರೆಸಿಕೊಂಡಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss