ತುಮಕೂರು: ತಿಪಟೂರಿನ ರೈಲ್ವೆ ನಿಲ್ದಾಣದಲ್ಲಿ ಮಾನವೀಯ ಕೆಲಸವೊಂದು ಇಂದು ನಡೆಯಿತು.
ರೈಲ್ವೆ ನಿಲ್ದಾಣ ದಲ್ಲಿ ಬಹಳ ವರ್ಷಗಳಿಂದ ಭಿಕ್ಷೆ ಮಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಎರಡೂ ಕಾಲಿಲ್ಲದ ಮಹಿಳೆಯೊಬ್ಬರು ಕೊವಿಡ್ ಕೃಪೆಯಿಂದ ಭಿಕ್ಷೆ ಇಲ್ಲದೆ ಉಪವಾಸ ಇರಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇಂದು ನಗರ ಸಂಚಾರದ ಸಂದರ್ಭದಲ್ಲಿ ಇದನ್ನು ಗಮನಿಸಿದ ಆಯುಕ್ತರಾದ ಉಮಾಕಾಂತ ಅವರು ತಾವೇ ಊಟ ತರಿಸಿ ಆಕೆಗೆ ತಿನ್ನಿಸುವ ಮೂಲಕ ಮಾನವೀಯತೆ ಮೆರೆದರು.