Saturday, June 25, 2022

Latest Posts

ತುರ್ತು ವಾಹನಗಳನ್ನು ಜಿಲ್ಲಾಡಳಿತಕ್ಕೆ ದೇಣಿಗೆ ನೀಡಿದ ಆರ್ ಬಿ ಐ ನೋಟು ಮುದ್ರಣ ಸಂಸ್ಥೆ

ಮೈಸೂರು: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಹಾಡಿ ಪ್ರದೇಶದ ವಾಪ್ತಿಯಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲೆಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆ, ಮೈಸೂರು ಶಾಖೆಯ ವತಿಯಿಂದ ಜಿಲ್ಲಾಡಳಿತಕ್ಕೆ ದೇಣಿಗೆ ನೀಡಿದ ಎರಡು ತುರ್ತು ವಾಹನಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ.ಅಮರ್‌ನಾಥ್ ಮಾತನಾಡಿ, ಎಚ್.ಡಿ.ಕೋಟೆತಾಲ್ಲೂಕಿನ ಬುಡಕಟ್ಟುಜನಾಂಗದವರಿಗೆ ತುರ್ತು ಸಮಯದಲ್ಲಿ ಅನುಕೂಲವಾಗಲಿ ಎಂದು ಎರಡು ತುರ್ತು ವಾಹನಗಳನ್ನು ದೇಣಿಗೆ ನೀಡಿದ್ದು, ವಾಹನಗಳನ್ನು ಹಾಡಿಯಲ್ಲಿ ವಾಸಿಸುವ ಜನರಿಗೆ ಬಳಸಿಕೊಳ್ಳಲಾಗುವುದು ಎಂದರು.
ಬಳಿಕ ಆರ್.ಬಿ.ಐ ನೋಟು ಮುದ್ರಣ ಸಂಸ್ಥೆಯ ವ್ಯವಸ್ಥಾಪಕರಾದ ಎನ್.ಜಿ.ಮುರುಳಿ ಅವರು ಮಾತನಾಡಿ, ಸಾಮಾನ್ಯಜನರಿಗೆ ಅನುಕೂಲವಾಗಲೆಂದು ನಮ್ಮ ಸಂಸ್ಥೆಯು ಅನೇಕ ಕ್ಷೇತ್ರಗಳಲ್ಲಿ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅದರಂತೆ ೨೯.೨ ಲಕ್ಷರೂ. ಮೌಲ್ಯದ ಎರಡು ಆ್ಯಂಬುಲೆನ್ಸ್ ವಾಹನಗಳನ್ನು ಹಾಡಿಜನರ ಅನುಕೂಲಕ್ಕೆ ನೀಡಿದೆ ಎಂದು ತಿಳಿಸಿದರು.
ಈ ವೇಳೆ ಆರ್.ಬಿ.ಐ ನೋಟು ಮುದ್ರಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಮೇಶ್‌ಕುಮಾರ್ ಲಭ, ಸಹಾಯಕ ಪ್ರಧಾನ ವ್ಯವಸ್ಥಾಪಕ ಅಜಿತ್‌ಕುಮಾರ್ ಕರಣ್ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss