Sunday, July 3, 2022

Latest Posts

ತುಳಸಿ ಕಷಾಯ ಮಾಡುವುದು ಹೇಗೆ? ದಿನವೂ 2 ಚಮಚ ಸೇವಿಸಿದರೆ ಏನೆಲ್ಲಾ ಆರೋಗ್ಯಕರ ಲಾಭವಿದೆ ಗೊತ್ತಾ? ಇದನ್ನು ಓದಿ…

ತುಳಸಿಯನ್ನು ಅನಾದಿ ಕಾಲದಿಂದಲೂ ಪೂಜನೀಯ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ತುಳಸಿಗಿಡವು ಅಡಿಯಿಂದ ಮುಡಿಯವರೆಗೂ ಔಷಧೀಯ ಗುಣವನ್ನು ಹೊಂದಿದೆ. ಆದರೆ ಇದು ಎಷ್ಟೋ ಜನಕ್ಕೆ ತಿಳಿದಿಲ್ಲ. ಇದೊಂದು ಪೂಜೆ ವಸ್ತು, ದೇವರಿಗೆ ಪ್ರೀಯವಾದದ್ದೆಂದು ದಿನವೂ ದೇವರ ಮುಡಿಗೆ ಸೇರಿಸುತ್ತಾರೆ.ತುಳಸಿಯಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್ ಪ್ಲೆಮಿಟರಿ,ಆ್ಯಂಟಿ ಕ್ಯಾನ್ಸರ್ ‌ಪ್ರಾಪರ್ಟಿ ಹೀಗೆ ಸಾಕಷ್ಟು ಹೆಲ್ತ್ ಬೆನಿಫಿಟ್ಸ್ ಕೊಡುತ್ತವೆ. ವೈಜ್ಞಾನಿಕವಾಗಿ ಇದನ್ನು ‘ಆ್ಯಂಟಿ ಪ್ರೆಸ್ ಏಜೆಂಟ್’ ಎಂದು ಹೇಳುತ್ತಾರೆ. ಏಕೆಂದರೆ ಇದು ನಮ್ಮ ಒತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ತುಳಸಿ ಕಷಾಯ ಸೇವಿಸಿದರೆ ಏನಾಗುತ್ತದೆ ಇಲ್ಲಿದೆ ಮಾಹಿತಿ…

ತುಳಸಿ ಕಷಾಯ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ:
ತುಳಸಿ
ನೀರು

ಮಾಡುವ ವಿಧಾನ:

ಮೊದಲಿಗೆ ಅರ್ಧ ಕಪ್ ನೀರು ತೆಗೆದುಕೊಳ್ಳಿ. ನಂತರ 4 ತುಳಸಿ ಎಲೆಗಳನ್ನು ಅದಕ್ಕೆ ಹಾಕಿರಿ. ಚೆನ್ನಾಗಿ ಕುದಿಸಿ. ಅದು 2 ಚಮಚ ಆಗುವರೆಗೆ ಕುದಿಸಿ. ದಿನವೂ 2 ಚಮಚ ಕಷಾಯ ಸೇವಿಸಿ.

ಲಾಭಗಳು:

ಶುಗರ್: ಸಕ್ಕರೆ ಕಾಯಿಲೆ ಇರುವವರು, ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ತುಳಸಿಕಷಾಯ ಸೇವಿಸಿದರೆ  ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ. ತುಳಸಿಯು ರಕ್ತದಲ್ಲಿರುವ ಸಿಹಿ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಕ್ಯಾನ್ಸರ್ ತಡೆಯುತ್ತದೆ: ಪ್ರತಿ ದಿನ ತುಳಸಿ ಕಷಾಯ 2 ಚಮಚ ಸೇವಿಸುವುದರಿಂದ ಕ್ಯಾನ್ಸರ್ ಬರದಂತೆ ತಡೆಯಬಹುದು. ತುಳಸಿ ಮತ್ತು ಶುಂಠಿ ಹಾಕಿ ತಯಾರಿಸುವ ಟೀ ಕುಡಿಯುವುದರಿಂದ ಬಾಯಿಯ ಕ್ಯಾನ್ಸರ್ ಮತ್ತು ಕಿಡ್ನಿಸ್ಟೋನ್ ತಡೆಯಬಹುದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಜ್ಞಾಪಕ ಶಕ್ತಿ ಹೆಚ್ಚಿಸುವುದು: ದಿನ ನಿತ್ಯ ತುಳಸಿ ಕಷಾಯ ಸೇವಿಸಿದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಿಗ್ಗೆ ಎದ್ದ ತಕ್ಷಣ ಈ ಐದಾರು ತುಳಸಿ ಎಲೆಯನ್ನು ತಿನ್ನಲು ಕೊಟ್ಟರೆ ಬುದ್ಧಿ ಚುರುಕು ಗೊಂಡು, ನೆನಪಿನ ಶಕ್ತಿ ಹೆಚ್ಚುತ್ತದೆ.

ಕೆಮ್ಮು, ನೆಗಡಿ:ಅತಿಯಾದ ಕೆಮ್ಮು, ನೆಗಡಿ ನಿವಾರಣೆಗೆ ತುಳಸಿ ಕಷಾಯ ರಾಮಬಾಣ.

ಅಜೀರ್ಣ ನಿವಾರಣೆ: ದಿನಕ್ಕೆ ಮೂರರಿಂದ ನಾಲ್ಕು ಸಲ ಒಂದು ಚಮಚ ತುಳಸಿ ಕಷಾಯ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.

ಬಾಯಿ ದುರ್ವಾಸನೆ: ತುಳಸಿ ಕಷಾಯ ಸೇವಿಸುವುದರಿಂದ ಬಾಯಿ ದುರ್ವಾಸನೆ ನಿವಾರಣೆಯಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss