Monday, July 4, 2022

Latest Posts

ತೂಕ ಇಳಿಸಬೇಕಂದ್ರೆ ತಪ್ಪದೇ ಈ ಪಾನೀಯಗಳನ್ನು ಸೇವಿಸಿ.. ಸಖತ್ ಪವರ್ ಫುಲ್

ತೂಕ ಇಳಿಸೋದು ಅನೇಕರ ಕನಸು, ಈ ಕನಸು ನಿಮ್ಮದೂ ಆಗಿದ್ಯಾ? ನೆನಪಿಡಿ ನಿಮ್ಮ ಆಹಾರ ಪದ್ಧತಿ ಸರಿ ಇದ್ದಾಗ ಕ್ರಮೇಣ ತೂಕ ಇಳಿಕೆಯಾಗುತ್ತದೆ. ದೇಹದ ತೂಕ ಇಳಿಸಿ ಫೀಟ್ ಆಗಿ ಕಾಣಲು ಪರದಾಡುತ್ತಿರುವವರಿಗೆ ಈ ಪಾನಿಯಗಳು ಸಖತ್ ಪವರ್ ಫುಲ್

ನೀರು: ಪ್ರತಿದಿನ ಕನಿಷ್ಠ 3,4 ಲೀಟರ್ ನೀರು ಕುಡಿಯಬೇಕು. ಇದರಿಂದ ದೇಹದ ತೂಕ ಇಳಿಕೆಯಾಗುತ್ತದೆ.

ಬ್ಲಾಕ್ ಟೀ: ಇದರಲ್ಲಿ ಹೆಚ್ಚು ಪೋಷಕಾಂಶಗಳಿದ್ದು, ಅವುಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ದೇಹದ ಬೊಜ್ಜನ್ನು ಕಡಿಮೆ ಮಾಡುತ್ತದೆ.

ಪ್ರೋಟೀನ್ ಶೇಕ್: ಇದನ್ನು ಕುಡಿಯುವುದರಿಂದ ಹೆಚ್ಚು ಕ್ಯಾಲೊರೀಸ್ ಬರ್ನ್ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸಿ ತೂಕ ಇಳಿಕೆಯಾಗಲಿದೆ.

ಆಪಲ್ ಸೈಡರ್ ವೆನಿಗರ್: ಇದರಲ್ಲಿರುವ ಆಸಿಟಿಕ್ ಆಮ್ಲವು ಚಯಾಪಚಯವನ್ನು ಸುಧಾರಿಸಲಿದೆ. ಇದನ್ನು ನಿಂಬೆರಸ, ಜೇನುತುಪ್ಪ ದೊಂದಿಗೆ ಬೆರಸಿ ಸೇವಿಸಬೇಕು.

ಜ್ಯೂಸ್: ತರಕಾರಿ ಹಾಗೂ ಹಣ್ಣಿನ ಜ್ಯೂಸ್ ಗಳಲ್ಲಿ ಕಡಿಮೆ ಸಕ್ಕರೆ ಅಥವಾ ಜೇನುತುಪ್ಪ ಬೆರಸಿ ಸೇವಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಗ್ರೀನ್ ಟೀ: ಇದನ್ನು ಪ್ರತಿದಿನ 2 ಬಾರಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗಿ ತೂಕ ಇಳಿಕೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss